ಭಾಗಮಂಡಲ, ಅ. ೧೬: ಕಾವೇರಿ ಜಾತ್ರೆಯ ವಿಶೇಷ ಅನುದಾನ ೫೦ ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಇದರಲ್ಲಿ ೫.೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಭಾಗಮಂಡಲದ ಕಾವೇರಮ್ಮ ಕೋಲ್‌ಮಂದ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಇದನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ತಲಕಾವೇರಿಯಲ್ಲಿ ೧೩ ಲಕ್ಷ ರೂಪಾಯಿ ವೆಚ್ಚದಲ್ಲಿ ೫ ಅಂಗಡಿ ಮಳಿಗೆಗಳನ್ನು ಮಾಡಲಾಗಿದ್ದು ಇದನ್ನು ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಉದ್ಘಾಟಿಸಿದರು. ಇದರೊಂದಿಗೆ ೪೪.೭೭ ಲಕ್ಷ ರೂಪಾಯಿ ವೆಚ್ಚದಲ್ಲಿ ಭಾಗಮಂಡಲದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಈ ಸಂದರ್ಭ ಉದ್ಘಾಟಿಸಲಾಯಿತು.

ಬಳಿಕ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ತಲಕಾವೇರಿಯಲ್ಲಿ ಯಾವುದೇ ಶೆಡ್ ರೂಪದಲ್ಲಿ ಅಂಗಡಿಗಳನ್ನು ತೆರೆಯುವಂತಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಎಂಟು ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಮಿತಾ, ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ದಂಡಿನ ಜಯಂತ್, ಸಿರಿಕಜೆ ನಾಗೇಶ್, ಅಮೆ ನಿತ್ಯನಂದ, ಗಂಗಮ್ಮ, ವೀಣಾ, ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಪಟ್ಟಮಾಡ ಸುಧೀರ್, ಪಿಡಿಓ ನಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.