ಗೋಣಿಕೊಪ್ಪ ವರದಿ, ಅ. ೧೬: ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದಲ್ಲಿ ಟಿ. ಶೆಟ್ಟಿಗೇರಿ ಗೌರಿ-ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ, ಸಾಂಸ್ಕೃತಿಕ ಸಂಸ್ಥೆ, ಕೊಡವ ತಕ್ಕ ಎಳ್ತ್ಕಾರಡ ಕೂಟ ಸಹಯೋಗದಲ್ಲಿ ಕಾವೇರಿ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮವನ್ನು ತಾ. ೧೮ ರಿಂದ ತಾ. ೨೭ ರವರೆಗೆ ಆಯೋಜಿಸಲಾಗಿದೆ.
೧೦ ದಿನ ಸಂಜೆ ೫ ಗಂಟೆಯಿAದ ರಾತ್ರಿ ೭.೩೦ ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ತಾ. ೧೮ ರಂದು ಕೊಡವ ನೈಟ್ಸ್ ಸಿಂಪೋನಿ ತಂಡದ ಆರ್ಕೆಸ್ಟಾç, ೧೯ ರಂದು ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕೃತಿಕ ಕಾರ್ಯಕ್ರಮ, ೨೦ ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ತಾ. ೨೧ ಮಂದತ್ತವ್ವ ಟ್ರಸ್ಟ್ ಕಾರ್ಯಕ್ರಮ, ತಾ. ೨೨ ರಂದು ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟ್ಕಾರಡ ಕಾರ್ಯಕ್ರಮ, ತಾ. ೨೩ ರಂದು ಪಿ ಆಂಡ್ ಜಿ ಸಂಘದ ಫ್ಯಾಷನ್ ಶೋ, ತಾ. ೨೪ ರಂದು ಕಾವೇರಿ ಕಾಲೇಜು ತಂಡದ ಕಾರ್ಯಕ್ರಮ, ತಾ. ೨೫ ರಂದು ಕುರ್ಚಿ, ಬೀರುಗ, ದಕ್ಷಿಣ ಗಂಗೆ ಕೊಡವ ಒಕ್ಕೂಟ ಕಾರ್ಯಕ್ರಮ, ತಾ. ೨೬ ರಂದು ಮಧ್ಯಾಹ್ನ ೧.೩೦ ಗಂಟೆಗೆ ತಾವಳಗೇರಿ ನಾಡಿಗೆ ಸೇರಿದ ಗ್ರಾಮಸ್ಥರಿಗೆ ಸ್ಲೋ ಬೈಕ್ ರೇಸ್, ಸಂಜೆ ಕೊಡವ ತೀನಿ ಪೈಪೋಟಿ, ತಳಿಯಪುಟ್ಟ್ ಪಜ್ಜಿ ತಯ್ಯಾರಿ, ಸಂಭ್ರಮ ಪೊಮ್ಮಕ್ಕಡ ತಂಡ ಹಾಗೂ ಅಪ್ಪಚ್ಚಕವಿ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ತಾ. ೨೭ ರಂದು ಮಧ್ಯಾಹ್ನ ೧.೩೦ ಗಂಟೆಗೆ ನಾಡಿಗೆ ಸೇರಿದ ಗ್ರಾಮಸ್ಥರಿಗೆ ಹಗ್ಗಜಗ್ಗಾಟ, ಸಂಜೆ ರೂಟ್ಸ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.