ಸೋಮವಾರಪೇಟೆ, ಅ. ೧೬: ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಸಂಘದ ಕೊಡಗು ಜಿಲ್ಲಾಧ್ಯಕ್ಷರಾಗಿ ಸೋಮ ವಾರಪೇಟೆ ತಾಲೂಕು ಕಚೇರಿಯ ಗ್ರಾಮ ಸಹಾಯಕ ಎನ್.ಸಿ. ಸುರೇಶ್ ಆಯ್ಕೆಯಾಗಿದ್ದಾರೆ. ಮಡಿಕೇರಿ ಕಾವೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲಾ ಘಟಕದ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪಿ.ಜಿ. ಜನಾರ್ಧನ, ಪ್ರಧಾನ ಕಾರ್ಯದರ್ಶಿಯಾಗಿ ರುದ್ರೇಶ್, ಖಜಾಂಚಿಯಾಗಿ ಎ.ಜೆ. ಷಣ್ಮುಖ ಆಯ್ಕೆಯಾಗಿದ್ದಾರೆ.