ಸಿದ್ದಾಪುರ, ಅ. ೧೬: ನಾಯಿಗಳು ದಾಳಿ ನಡೆಸಿ ಚಿರತೆಯನ್ನು ಹೋಲುವ ಕಾಡು ಬೆಕ್ಕನ್ನು ಕೊಂದ ಘಟನೆ ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುAಡಿಯಲ್ಲಿ ನಡೆದಿದೆ.
ಕುಂಬಾರಗುAಡಿಯ ನದಿ ತೀರದ ಸಮೀಪ ಚಿರತೆಯನ್ನು ಹೋಲುವ ಬೆಕ್ಕು ಕಾಣಿಸಿಕೊಂಡಿದ್ದು, ಅದನ್ನು ಆ ಭಾಗದ ನಾಯಿಗಳು ಸುತ್ತುವರಿದು ದಾಳಿ ನಡೆಸಿ ಸಾಯಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದಾರೆ ಸಿದ್ದಾಪುರದ ಸಮೀಪದ ಕಾವೇರಿ ಸೇತುವೆ ಬಳಿ ಹಾಗೂ ನದಿ ತೀರದ ಸಮೀಪ ಕಾಡಿನಲ್ಲಿ ಆಗಿಂದಾಗ್ಗೆ ಈ ಪ್ರಾಣಿ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ