ಮಡಿಕೇರಿ, ಅ. ೧೫; ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಜಂಟಿ ಆಶ್ರಯದಲ್ಲಿ ಅರೆಭಾಷೆ ವಿಶ್ವಕೋಶ ಬಿಡುಗಡೆ, ವಿಚಾರ ಗೋಷ್ಠಿ ಹಾಗೂ ಅರೆಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಬೆಂಗಳೂರಿನ ಚೌಡೇಶ್ವರಿ ನಗರ ಲಗ್ಗೆರೆಯಲ್ಲಿರುವ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿಶ್ವಕೋಶದ ಬಿಡುಗಡೆಯನ್ನು ಲೋಕಸಭಾ ಸದಸ್ಯ ಡಿ.ವಿ. ಸದಾನದಗೌಡರು ನೆರವೇರಿಸಿದರು. ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಹಾ.ತಿ. ಕೃಷ್ಣೇಗೌಡ ವಿಶ್ವಕೋಶದ ಬಗ್ಗೆ ತಿಳಿಸಿದರು. ಅರೆಭಾಷೆ ವಿಚಾರಗೋಷ್ಠಿಯಲ್ಲಿ ರಾಮನಗರದ ಸ.ಪ್ರ.ದ. ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ರಾಜೇಶ್ ತೇನನ ಅವರು ನಗರ ಮತ್ತು ಅರೆಭಾಷೆ ಬಗ್ಗೆ ಮಾತನಾಡಿದರು. ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬರ್ ಸಮೋ ಅಭಿವ್ಯಕ್ತಿ ಮಾಧ್ಯಮಲಿ ಅರೆಭಾಷೆ ವಿಚಾರದ ಬಗ್ಗೆ ತಿಳಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಮದ್ರಾಸ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ. ರಾಮಸ್ವಾಮಿ ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅದ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ವಹಿಸಿದ್ದರು.

ನಂತರ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ಮದ್ದಳೆ ಅಕ್ಷಯ ರಾವ್ ವಿಟ್ಲ, ಚಂಡೆ ಶ್ರೀಶ ರಾವ್ ನಿಡ್ಲೆ, ವಿದುರನಾಗಿ ಶ್ರೀ ನಾರಾಯಣಗೌಡ ಕೊಳ್ತಿಗೆ, ಕೌರವನಾಗಿ ಜಬ್ಬರ್ ಸಮೋ ಸಂಪಾಜೆ, ಕೃಷ್ಣನಾಗಿ ಜಯಾನಂದ ಸಂಪಾಜೆ ಭಾಗವಹಿಸಿದ್ದರು. ಅತಿಥಿಗಳಾಗಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಆಧ್ಯಕ್ಷ ರವೀಂದ್ರನಾಥ ಕೇವಳ, ಕೊಡಗು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ, ಗೌಡ ಸಮಾಜ ಯಲಹಂಕದ ಅಧ್ಯಕ್ಷ ಅಜಿತ್ ಕುಮಾರ್ ಕುಂಞಳಿಯನ, ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವಯ್ಯ ಕತ್ರಿಕೊಲ್ಲಿ, ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು. ನೇಹಾ ರೋಷನ್ ಪೋರೆಯನ ಪ್ರಾರ್ಥಿಸಿದರು. ಧನಂಜಯ ಅಗೋಳಿಕಜೆ ಕಾರ್ಯಕ್ರಮ ನಿರೂಪಿಸಿದರು.