ಭಾಗಮಂಡಲ, ಅ. ೧೫: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಸಿದ್ಧತಾ ಕಾರ್ಯಗಳು ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ನಡೆಯುತ್ತಿವೆ. ಇಂದು ಬೆಳಿಗ್ಗೆ ೧೧.೪೫ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸಿ ನಂದಾದೀಪವನ್ನು ಉರಿಸಲಾಯಿತು. ೪.೧೫ಕ್ಕೆ ಕಾಣಿಕೆ ಡಬ್ಬಿ ಇಡುವ ಕಾರ್ಯಕ್ರಮ ಜರುಗಿತು.

ಬೆಳಿಗ್ಗೆ ೧೧.೪೦ಕ್ಕೆ ದೇವಾಲಯದ ನಂದಾದೀಪದ ಗುಡಿಯಲ್ಲಿ ವಿಶೇಷ ಕಾರ್ಯಗಳು ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ನಡೆಯುತ್ತಿವೆ. ಇಂದು ಬೆಳಿಗ್ಗೆ ೧೧.೪೫ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸಿ ನಂದಾದೀಪವನ್ನು ಉರಿಸಲಾಯಿತು. ೪.೧೫ಕ್ಕೆ ಕಾಣಿಕೆ ಡಬ್ಬಿ ಇಡುವ ಕಾರ್ಯಕ್ರಮ ಜರುಗಿತು.

ಬೆಳಿಗ್ಗೆ ೧೧.೪೦ಕ್ಕೆ ದೇವಾಲಯದ ನಂದಾದೀಪದ ಗುಡಿಯಲ್ಲಿ ವಿಶೇಷ ರೂಪದಲ್ಲಿ ಅಕ್ಕಿ ವಿತರಿಸಲಾಯಿತು. ನಂದಾದೀಪವು ಒಂದು ತಿಂಗಳ ಕಾಲ ತುಪ್ಪದಲ್ಲಿ ಉರಿಯಲಿದೆ. ನವೆಂಬರ್ ೧೭ರವರೆಗೆ ಆರದೆ ಉರಿಯುವಂತೆ ಇರಲು ಹಗಲು, ರಾತ್ರಿ ಸಿಬ್ಬಂದಿ ಯೋಜನೆ ಮಾಡಲಾಗಿದೆ . ಅಕ್ಷಯ ಪಾತ್ರೆಗೆ ಅಕ್ಕಿ ಸುರಿದ ಬಳಿಕ ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಯಿತು. ಒಂದು ತಿಂಗಳ ಕಾಲ ದೇವಾಲಯದಲ್ಲಿ ಅಕ್ಕಿಯನ್ನು ನೀಡಲಾಗುವುದು. ಮಹಿಳೆಯರು ತಮ್ಮ ಸೆರಗಿನಲ್ಲಿ ಅಕ್ಷಯ ಪಾತ್ರೆಯಿಂದ ಅಕ್ಕಿಯನ್ನು ಪ್ರಸಾದ ರೂಪದಲ್ಲಿ ಪಡೆದುಕೊಂಡರು. ಇದರಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಇದನ್ನು ಪಾಯಸದ ರೂಪದಲ್ಲಿ ಸೇವಿಸುತ್ತಾರೆ. ತಾ. ೧೬ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಕಾವೇರಿ

(ಮೊದಲ ಪುಟದಿಂದ) ಮಾತೆಗೆ ತೋಡಿಸುವ ಆಭರಣವನ್ನು ತೆಗೆದುಕೊಂಡು ಹೋಗಿ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ತೊಡಗಿಸಲಾಗುವುದು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಕಾರ್ಯನಿರ್ವಹಣಾಧಿ ಕಾರಿ ಕೃಷ್ಣಪ್ಪ, ಪಾರುಪತ್ತೆಗಾರ ಪೊನ್ನಣ್ಣ, ಅರ್ಚಕ ರವಿ ಹೆಬ್ಬಾರ್, ಕುದುಪಜೆ ಪ್ರಕಾಶ್ ಮತ್ತಿತರರು ಇದ್ದರು.

ಸಿದ್ಧತೆ ಪರಿಶೀಲನೆ: ಇಂದು ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳಿಗೆ ಆಡಳಿತ ಅಧಿಕಾರಿ ನಂಜುAಡೇಗೌಡ ಭೇಟಿ ನೀಡಿ ಜಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು ಜಾತ್ರೆಯ ವಿಶೇಷವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಅಂತಿಮ ಹಂತದಲ್ಲಿದೆ. ಭಾಗಮಂಡಲದ ಅತಿಥಿಗೃಹದಿಂದ ತಲಕಾವೇರಿಯವರೆಗೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯವಿರುವಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಜಾತ್ರೆ ಸರಳವಾಗಿತ್ತು. ಈ ಬಾರಿ ಅಧಿಕ ಸಂಖ್ಯೆಯ ಭಕ್ತರು ಜಾತ್ರೆಗೆ ಆಗಮಿಸುವ ಸಾಧ್ಯತೆ ಇರುವುದರಿಂದ ತಾ. ೧೭ರಂದು ಸಂಜೆ ೬ರ ವರೆಗೆ ಪಿಂಡ ಪ್ರದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ತಾ. ೧೮ ರಂದು ಜನರ ಅನುಕೂಲ ನೋಡಿಕೊಂಡು ಪಿಂಡ ಪ್ರದಾನಕ್ಕೆ ಅವಕಾಶ ನೀಡಲಾಗುವುದು ಎಂದರು.

ತೀರ್ಥೋದ್ಭವದ ಬಳಿಕ ರಾತ್ರಿ ೧೧ ಗಂಟೆಯವರೆಗೆ ನಿರಂತರವಾಗಿ ತೀರ್ಥ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ತೀರ್ಥೋದ್ಭವದ ವೀಕ್ಷಣೆಗೆ ಎರಡು ಎಲ್‌ಇಡಿ ಪರದೆಯನ್ನು ಅಳವಡಿಸಲಾಗುವುದು. ಬಂದೋಬಸ್ತ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ. ತಲಕಾವೇರಿಯಲ್ಲಿ ಕುಂಡಿಕೆ ಸುತ್ತ ಬ್ಯಾರಿಕೇಡ್ ಅಳವಡಿಸಿ ಹೈ ಮಾಸ್ಕ್ ಲ್ಯಾಂಪ್ ಬಳಕೆ ಮಾಡಲಾಗುತ್ತಿದೆ. ಭಾಗಮಂಡಲದಲ್ಲಿ ಅನ್ನದಾನ ಯಥಾ ಸ್ಥಿತಿಯಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾ. ೧೭ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ವೇದಿಕೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಹೂವಿನ ಅಲಂಕಾರವನ್ನು ತಾ. ೧೭ ರಂದು ಬೆಳಿಗ್ಗೆ ಮಾಡಲಾಗುವುದು. ಭಾಗಮಂಡಲ ದೇವಾಲಯ ೧೭ರಂದು ರಾತ್ರಿ ೧೧ ಗಂಟೆಯವರೆಗೆ ತೆರೆದಿರುತ್ತದೆ ಎಂದರು. ಮಳೆ ವ್ಯವಸ್ಥೆಗಾಗಿ ತಲಕಾವೇರಿಯ ಅನ್ನದಾನ ಛತ್ರದ ಮುಂಭಾಗದಲ್ಲಿ ವಾಟರ್ ಪ್ರೂಫ್ ಶಾಮಿಯಾನ ಅಳವಡಿಸಲಾಗಿದೆ. ಗಣ್ಯರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ೪೦ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ದೇವಾಲಯದ ವತಿಯಿಂದ ಮಾಡಲಾಗಿದೆ ಎಂದರು.

ಭಾಗಮAಡಲದಲ್ಲಿ ಮುಡಿ ಶೆಡ್‌ನಲ್ಲಿ ಒಂದು ವಾಟರ್ ಪ್ರೂಫ್ ಶಾಮಿಯಾನವನ್ನು ಅಳವಡಿಸಲಾಗಿದೆ ಎಂದರು. ಈ ಬಾರಿ ವಿಶೇಷವಾಗಿ ಪ್ರಸಾದವಾಗಿ ಸಿಹಿ ಲಾಡು ವಿತರಣೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.

-ಸುನಿಲ್ ಕುಯ್ಯಮುಡಿ