ದ್ರಾವಿಡ ಭಾಷೆಗಳ ಪರಿವಾರಕ್ಕೆ ಸೇರಿದ ಪ್ರಾದೇಶಿಕ ಭಾಷೆಯೆಂದೇ ಗುರುತಿಸಬಹುದಾದ ಅರೆಭಾಷೆಗೆ ನೂರಾರು ವರ್ಷದ ಇತಿಹಾಸ ಇದೆಯೆಂದು ವಿಧ್ವಾಂಸರು ಹೇಳುತ್ತಾರೆ. ಒಂದು ಭಾಷೆ ವಿಕಸನ ಆಗಬೇಕಾದರೆ ಅದನ್ನು ಮಾತನಾಡುವ ನಾಗರಿಕರಿಂದ ಸಾಧ್ಯವೆಂದು ತಿಳಿದುಕೊಳ್ಳಬೇಕು. ಮತ್ತು ಅದು ಆ ಭಾಷೆಯನ್ನು ಓದಿದ ಜನರ ಸಂಪ್ರದಾಯವೆAದು ಅರ್ಥೈಸಬೇಕು. ರಾಜಕೀಯ ಮತ್ತು ಸಾಮಾಜಿಕ ಕಾರಣದಿಂದಾಗಿ ಅರೆಭಾಷೆಯಲ್ಲಿ ಬರಹ ಸಾಹಿತ್ಯ ರಚನೆ ಆಗದಿದ್ದರೂ ಅರೆಭಾಷಿಗರ ಸೃಜನಶೀಲತೆಗೆ ಅದರಿಂದ ಏನೂ ಕಡಿಮೆಯಾಗಿಲ್ಲ. ಸಂಸ್ಕೃತಿಯ ವಿಚಾರಕ್ಕೆ ಬಂದಾಗ ಅವೆಲ್ಲವೂ ಜನಪದ ವಸ್ತುವೆಂದೇ ತಿಳಿಯಬೇಕು. ಈ ಜನಪದ ವಸ್ತುಗಳು ಜನರ ಬದುಕಿನಲ್ಲಿ ಮತ್ತು ಆಚರಣೆಗಳಲ್ಲಿ ಇವೆ. ಅವರ ಬಾಯಿಮಾತಿನಲ್ಲಿರುವ ಹಾಡು, ಕತೆ, ಗಾದೆ, ಒಗಟು, ನುಡಿಗಟ್ಟು ಇತ್ಯಾದಿ ಪ್ರಾಕಾರದ ಮೌಖಿಕ ಸಾಹಿತ್ಯಗಳು ಹೆಚ್ಚಾಗಿವೆ. ವಾರ್ಷಿಕಾವರ್ತನ ಮತ್ತು ಜೀವನಾವರ್ತನಕ್ಕೆ ಸಂಬAಧಿಸಿದ ಬೇಸಾಯ, ಮದುವೆ, ಹಬ್ಬ ಇಂತಹ ಸಾಮೂಹಿಕ ಕಾರ್ಯಗಳು ಕುಣಿತ, ಆಟ, ವಿನೋದ ಇತ್ಯಾದಿ ಅನೇಕ ಪ್ರ್ರಾಕಾರದ ಪದ ಸಂಪತ್ತು ಅರೆಭಾಷಿಗರಲ್ಲಿ ಪಾರಂಪರಿಕವಾಗಿ ಇದ್ದು ಇವುಗಳಿಗೆ ಸಂಬAಧಿಸಿದ ಅರೆಭಾಷಿಕ ಪದಗಳು ಜನರ ಮಾತುಕತೆಗಳು ಅಳಿವಿನಂಚಿನಲ್ಲಿವೆ. ಅಂತಹ ಪದಗಳನ್ನು ಸಂಗ್ರಹಿಸಿ ಅವುಗಳ ಮೂಲ, ಪದನಿಷ್ಪತ್ತಿ, ಸಮಾನಾರ್ಥಗಳು ಮತ್ತು ಜ್ಞಾತಿ ಪದಗಳನ್ನು ಕರಾವಳಿ, ಮಲೆನಾಡು ಪ್ರದೇಶದಲ್ಲಿ ಅಧ್ಯಯನಕ್ಕೆ ಒಳಪಡಿಸುವ ಅಗತ್ಯ ಇದೆ. ಇದರಿಂದ ದ್ರಾವಿಡ ಮೂಲರೂಪಕ್ಕೂ ಅರೆಭಾಷೆ ಮತ್ತು ಇತರ ಪ್ರಾದೇಶಿಕ ಪದಗಳಿಗಿರುವ ಮೂಲ ರೂಪವನ್ನು ಕಂಡುಕೊಳ್ಳಲು ಸಹಕಾರಿಯಾಗಬಹುದು.
ಅರೆಭಾಷೆ ಪದಕೋಶ ರಚನೆ, ಯೋಜನೆ ತಯಾರಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ೧೫ ಡಿಸೆಂಬರ್ ೨೦೧೧ರಲ್ಲಿ ಕರ್ನಾಟಕ ಸರ್ಕಾದ ಸಂಸ್ಕೃತಿ ಇಲಾಖೆಯ ನಿರ್ದೇಶನದಲ್ಲಿ ಅಧಿಕೃತವಾಗಿ ಆರಂಭಗೊAಡಿತು. ಅರೆಭಾಷೆ ಪದಕೋಶ ತಯಾರು ಮಾಡುವ ಚರ್ಚೆ ಅಕಾಡೆಮಿಯಲ್ಲಿ ಆರಂಭದಿAದಲೇ ಇತ್ತು. ಅಕ್ಟೋಬರ್ ೨೦೧೯ರಲ್ಲಿ ಲಕ್ಷಿö್ಮÃನಾರಾಯಣ ಕಜೆಗದ್ದೆ ನೇತೃತ್ವದಲ್ಲಿ ಆರಂಭವಾದ ನಾಲ್ಕನೆಯ ಅವಧಿಯ ಅಕಾಡೆಮಿ ಕ್ರಿಯಾಯೋಜನೆಯಲ್ಲಿ ತುಳುವಿನಂತೆ ಲೆಕ್ಷಿಕನ್ ಮಾದರಿಯಲ್ಲಿ ಅರೆಭಾಷೆ ಪದಕೋಶ (ಅರೆಭಾಷೆ, ಕನ್ನಡ, ಇಂಗ್ಲಿಷ್ ಡಿಕ್ಷನರಿ) ತಯಾರಿ ಮಾಡಬೇಕೆಂದು ಚರ್ಚೆಯಾಯಿತು. ಕೋಡಿ ಕುಶಾಲಪ್ಪ ಗೌಡರ ಸಲಹೆಯಂತೆ ಸುಳ್ಯ ಮತ್ತು ಮಡಿಕೇರಿಯಲ್ಲಿ ಅರೆಭಾಷೆ ವಿಧ್ವಾಂಸರ ಸಭೆ ಸಂಶೋಧನಾ ಸಹಾಯಕರಿಂದ ಕ್ಷೇತ್ರಕಾರ್ಯ ಮಾಡಿಸಿ ಪದ ಸಂಗ್ರಹ ಮಾಡಲಾಯಿತು.
ರಚನೆಯ ಪೂರ್ವತಯಾರಿ
ಮದ್ರಾಸ್ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾದ್ಯಾಪಕರಾದ ಪ್ರೊ. ಚೆ. ರಾಮಸ್ವಾಮಿಯವರ ಮಾರ್ಗದರ್ಶನದಲ್ಲಿ ಸುಳ್ಯ ಮತ್ತು ಮಡಿಕೇರಿಯಲ್ಲಿ ನವೆಂಬರ್ ೨೦೨೦ರಲ್ಲಿ ಅರೆಭಾಷೆ ಪದಕೋಶ ರಚನೆಗೆ ಪೂರ್ವತಯಾರಿ ಸಭೆ ಮತ್ತು ಪದಕೋಶ ತಯಾರಿ ಕಮ್ಮಟವನ್ನು ನಡೆಸಲಾಯಿತು. ಈ ಕಮ್ಮಟದಲ್ಲಿ ೮ ಮಂದಿ ಸಂಶೋಧನಾ ಸಹಾಯಕರು ಸತತ ನಾಲ್ಕು ವಾರಗಳಲ್ಲಿ ೧೪ ಸಾವಿರ ಪದಗಳನ್ನು ಸಂಗ್ರಹಿಸಿ ಕೊಟ್ಟರು. ಅಲ್ಲದೆ ಈಗಾಗಲೇ ಪ್ರಕಟವಾದ ಕೆ.ಆರ್. ಗಂಗಾಧರರ ಅರೆಭಾಷೆ, ಕನ್ನಡ, ಇಂಗ್ಲಿಷ್ ಶಬ್ದಕೋಶ, ಹಲವಾರು ಸಂಶೋಧನೆ ಮತ್ತು ಪ್ರಕಟಿತ ಪುಸ್ತಕಗಳಿಂದ ಪದಗಳನ್ನು ಸಂಪಾದಿಸಿ ೧೮ ಸಾವಿರ ಪದಗಳನ್ನು ಅರೆಭಾಷೆ ಪದಕೋಶದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಯಿತು.
ಪ್ರಸ್ತುತ ಅರೆಭಾಷೆ ಪದಕೋಶದಲ್ಲಿ ೧೫೦೦ಕ್ಕಿಂತ ಹೆಚ್ಚು ಗಾದೆಗಳು, ೭೫೦ಕ್ಕಿಂತ ಹೆಚ್ಚು ಒಗಟು ನುಡಿಗಟ್ಟುಗಳು ಹಾಗೂ ೧೮ ಸಾವಿರ ಪದಗಳಿಗೂ ಪ್ರಯೋಗ ವಾಕ್ಯಗಳನ್ನು ನೀಡಲಾಗಿದೆ. ಪದಕೋಶದಲ್ಲಿ ೯೦೦ಕ್ಕಿಂತ ಹೆಚ್ಚು ಮನೆತನ, ೧೦೦೦ಕ್ಕಿಂತ ಹೆಚ್ಚು ಸ್ಥಳನಾಮ ಹಾಗೂ ೧೫೦ಕ್ಕಿಂತ ಹೆಚ್ಚು ವ್ಯಕ್ತಿನಾಮಗಳು ಇವೆ.
ಪದ ಸಂಗ್ರಹ ಮತ್ತು ಸಂಪಾದನೆ ವಿಧಾನ
ಸಾಮಾನ್ಯವಾಗಿ ಪದಗಳನ್ನು ಕಾರ್ಡ್ ಮೂಲಕ ಬರೆದು ಆಕಾರಾದಿಯಾಗಿ ಜೋಡಿಸಿ ಪದಕೋಶ ಮಾಡುವ ಕ್ರಮ. ಆದರೆ ಕೊರೊನಾ ಕಾಲದಲ್ಲಿ ಕ್ಷೇತ್ರಕಾರ್ಯದಿಂದ ಸಂಗ್ರಹಿಸಿದ ಪದಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡುವ ಸೂಚನೆಯನ್ನು ನೀಡಲಾಯಿತು. ಹಾಗಾಗಿ ಕ್ಷೇತ್ರಕಾರ್ಯ ಮಾಡುವವರಿಗೆ ಮೊಬೈಲ್ ತಂತ್ರಜ್ಞಾನ ಬಳಸಿ ಆಯಾ ದಿನ ಪದ ಸಂಗ್ರಹಿಸಿ ಅಪ್ಲೋಡ್ ಮಾಡುವ ತರಬೇತಿಯನ್ನೂ ನೀಡಲಾಯಿತು. ಸಂಶೋಧನಾ ಸಹಾಯಕರಿಗೆ ಆಗಾಗ್ಗೆ ಗೂಗಲ್ ಮೀಟ್ ಮೂಲಕ ಸಲಹೆ ಸೂಚನೆಗಳನ್ನು ನೀಡಿ ಸಂಗ್ರಹಕಾರ್ಯದ ವೇಗವನ್ನು ಹೆಚ್ಚಿಸಲಾಯಿತು. ಹೀಗೆ ಡಿಸೆಂಬರ್ ೨೦೨೦ರಿಂದ ಮಾರ್ಚ್ ೨೦೨೧ರ ನಾಲ್ಕು ತಿಂಗಳ ಅವಧಿಯಲ್ಲಿ ೩೦ಕ್ಕಿಂತ ಹೆಚ್ಚು ಪದಗಳ ಸಂಗ್ರಹವಾಯಿತು.
ಆನ್ಲೈನ್ ಸಂಪಾದನೆ ವಿಧಾನ
ಕೋವಿಡ್ ಎರಡನೇ ಅಲೆಯಿಂದಾಗಿ ಯಾರೂ ಮನೆಯಿಂದಲೇ ಹೊರಡುವಂತಿರಲಿಲ್ಲ. ಆಗ ಆಯಾ ಜಾಗದಿಂದ ಆನ್ಲೈನ್ ಸಂಪಾದನೆಯ ಕೆಲಸಕ್ಕೆ ತೊಡಗಿಕೊಳ್ಳಲಾಯಿತು. ೩೦ ಸಾವಿರ ಪದಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ೧೮ ಸಾವಿರದಷ್ಟು ಪದಗಳಿಗೆ ಪದ, ವ್ಯಾಕರಣ ವಿಶೇಷ, ಐಪಿಎ, ರೋಮನ್ ಇಟಾಲಿಕ್, ಸಾಂಸ್ಕೃತಿಕ ಪದ, ಕನ್ನಡ, ಇಂಗ್ಲಿಷ್ ಅರ್ಥ, ಗಾದೆ, ನುಡಿಗಟ್ಟು, ಒಗಟು, ವಾಕ್ಯಪ್ರಯೋಗ, ಪದಪ್ರಯೋಗ ಹೀಗೆ ಹಲವು ಭಾಗಗಳಲ್ಲಿ ಸಂಪಾದಿಸಲಾಯಿತು. ಮುಖ್ಯ ಸಂಪಾದನಾ ಜವಾಬ್ದಾರಿಯನ್ನು ಡಾ. ವಿಶ್ವನಾಥ ಬದಿಕಾನ ವಹಿಸಿಕೊಂಡರು. ಸಂಪಾದಕರಾಗಿ ಭರತೇಶ ಅಲಸಂಡೆಮಜಲು, ಇಂಗ್ಲಿಷ್ ಸಂಪಾದಕರಾಗಿ ಡಾ. ಎನ್. ಗಿರೀಶ್, ಅರೆಭಾಷೆ ಸಂಪಾದಕರಾಗಿ ಕೆಂಜನ ಮಮತಾ ಪ್ರಸಾದ್ ಇವರೆಲ್ಲರೂ ಬೇರೆಬೇರೆ ಸ್ಥಳಗಳಲ್ಲಿ ಕುಳಿತು ಸಂಪಾದನೆಗೆ ತೊಡಗಿದರು. ಕರಡು ಪ್ರತಿ ತಿದ್ದುವ ಸಂದರ್ಭದಲ್ಲಿ ಹಲವರು ಒಟ್ಟಾಗಿ ಕುಳಿತು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಿ ಎಲ್ಲರೂ ನೋಡಿ ತಿದ್ದುವ ಕೆಲಸವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕರಡು ಪ್ರತಿ ತಿದ್ದಲು ಅಕಾಡೆಮಿ ಸದಸ್ಯರಾದ ಪುರುಷೋತ್ತಮ ಕಿರ್ಲಾಯ, ಕಿರಣ್ ಕುಂಬಳಚೇರಿ ಡಾ. ಪುರುಷೋತ್ತಮ ಕೆ.ವಿ. ಕರಂಗಲ್ಲು, ವಿಧ್ವಾಂಸರಾದ ಪ್ರೊ. ಜೆ. ರಾಮಸ್ವಾಮಿ, ಭಾಷಾ ಪರಿಣಿತರಾದ ಬಾರಿಯಂಡ ಜೋಯಪ್ಪ, ಸೀತಾರಾಮ ಕೇವಳ, ಸರೋಜ ಎಂ.ಕೆ., ಮನೋಜ್ ಕುಡೆಕಲ್ಲು ಸಹಕರಿಸಿದರು.
ಪದಗಳ ಸಂಗ್ರಹಣೆಯ ವ್ಯಾಪ್ತಿ
ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರ, ಐಗೂರು, ಕಾಜೂರು, ಕೊಡ್ಲಿಪೇಟೆ, ಸೋಮವಾರಪೇಟೆ, ಶನಿವಾರಸಂತೆ, ಭಾಗಮಂಡಲ, ಮರಗೋಡು, ತೊಡಿಕಾನ, ಪೆರಾಜೆ, ಮಡಿಕೇರಿ, ಗಾಳಿಬೀಡು, ಮದೆÀನಾಡು, ಬೆಟ್ಟತ್ತೂರು, ಕುಶಾಲನಗರ, ಸುಂಟಿಕೊಪ್ಪ, ನಾಪೋಕ್ಲು, ಪೊನ್ನಂಪೇಟೆ, ವೀರಾಜಪೇಟೆ, ಪಾಲಿಬೆಟ್ಟ, ಗೋಣಿಕೊಪ್ಪ, ದಕ್ಷಿಣಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಕೊಲ್ಲಮೊಗ್ರ, ನಡುಗಲ್ಲು, ಬಾಳ್ಗೋಡು, ಹರಿಹರ ಪಲ್ಲತಡ್ಕ, ಕಂದ್ರಪ್ಪಾಡಿ, ಗುತ್ತಿಗಾರು, ದೇವಚಳ್ಳ, ಪಂಬೆತ್ತಾಡಿ, ಉಪ್ಪುಕಳ, ಮೆಂಟೆಕಜೆ, ಕಪ್ಪಡ್ಕ, ಕಡಮಕಲ್ಲು, ಕರಂಗಲ್ಲು, ದೊಡ್ಡತೋಟ, ಮಡಪ್ಪಾಡಿ, ಎಲಿಮಲೆ, ಪೈಲಾರ್, ಚೊಕ್ಕಾಡಿ, ಕುಕ್ಕುಜಡ್ಕ, ನಾರ್ಣಕಜೆ (ಗುತ್ತಿಗಾರು ಜಿಲ್ಲಾ ಪಂಚಾಯಿತಿ); ಅರಂತೋಡು, ಮರ್ಕಂಜ, ಉಬರಡ್ಕ, ಆಲೆಟ್ಟಿ, ಬಡ್ಡಡ್ಕ, ಸುಳ್ಯ, ಐವರ್ನಾಡ್, ನಿಂತಿಕಲ್ಲು, ಬೆಳ್ಳಾರೆ (ಅರಂತೋಡು ಮತ್ತು ಬೆಳ್ಳಾರೆ ಜಿಲ್ಲಾ ಪಂಚಾಯಿತಿ); ಕಣ್ಕೂರು, ಕೋಲ್ಚಾರ್, ಬಂದಡ್ಕ, ಕನಕಮಜಲು, ಜಾಲ್ಸೂರು, ಪಂಜಿಕಲ್ಲು, ಅಜ್ಜಾವರ, ಅಡೂರು, ಪರಪ್ಪೆ, ಮಂಡೆಕೋಲು, ಮುಡೂರು (ಜಾಲ್ಸೂರು ಜಿಲ್ಲಾ ಪಂಚಾಯಿತಿ ಮತ್ತು ಕಾಸರಗೋಡಿನ ಗಡಿ ಭಾಗ) ಕಡಬ, ಸುಬ್ರಹ್ಮಣ್ಯ, ಏಣೆಕಲ್ಲು, ಪಂಜ, ಬಳ್ಪ, ಬಳ್ಳಕ್ಕ (ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಡಬ)
ಮಾಹಿತಿ ಸಂಗ್ರಹ ವಿಧಾನ ಮತ್ತು ವರ್ಗೀಕರಣ
ವಿಸಯ ೧ : ಮನೆ ಮತ್ತೆ ಮನೆ ಒಳಗೆನ ಬಾಗ, ಮನೆ ಮತ್ತೆ ಒಕ್ಕಲ್ ಸಮ್ಮಂದಿ ಪದಗ, ಕೊಟಗೆ, ಕೊಟಗೆ ಒಳಗೆ ಉಪಯೋಗಿಸ್ವ ವಸ್ತು, ದನದ ಕೊಟಗೆ ಬೇರೆಬೇರೆ ಬಾಗ, ದಿಕ್ಕ್ ಮತ್ತೆ ವಾಸ್ತು ಇತ್ಯಾದಿ ವಿವರ ಸಂಗ್ರಹ
ವಿಸಯ ೨ : ಮೊನ್ಸ ಮತ್ತೆ ಪ್ರಾಣಿ ಹಕ್ಕಿಗಳ ತೆನಸ್ಗ, ಹೆಣ್ಣ್ ಗಂಡ್ನ ಹೇಳ್ವ ಪದಗ, ದೇವರ್, ದೈವ, ದೆವ್ವಗಳ, ಲೌಕಿಕ, ಅಲೌಕಿಕ ಸಮ್ಮಂದಿ ಪದಗ, ಬಟ್ಟೆ ಬರೆ, ಮೊದುವೆ(ಹೆಣ್ಣ್ ಗಂಡ್ ಸಮ್ಮಂದಿ) ಮತ್ತೆ ಆಚರಣೆ ಸಮ್ಮಂದಿ ಪದ, ಮೊನ್ಸನ ಸರೀರದ ಅಂಗಗ, ಮೊನ್ಸ ಸಮ್ಮಂದಗ, ಹುಟ್ಟ್ ಮತ್ತೆ ಸಾವು,(ಹೆಣ್ಣ್ ಗಂಡ್) ಆಚರಣೆ ಸಮ್ಮಂದಿ ಪದಗ,
ವಿಸಯ ೩ : ಅಡುಗೆ ಮತ್ತೆ ಅಡುಗೆ ತಯಾರ್ಸ್ವ ವಿದಾನಗ, ಬೇಸಾಯ ಕೊಯ್ಲ್, ಬೀಜ ಸಂಸ್ಕರಣೆ, ಬತ್ತದ ವಿದಗ ಕಾಡ್ ಪ್ರಾಣಿ ಹಕ್ಕಿಗಳ ಹೆಸರ್ಗ, ಕೀಟಗ, ಕೃಸಿ ಉತ್ಪನ್ನಗ, ಉಪಕರಣಗ, ಕೃಸಿ ವಿದಾನಗ, ಕೃಸಿ ಸಮಯಗ, ಕೃಸಿ ವ್ಯಕ್ತಿವಾಚಕ ಪದಗ, ಕೆಲ್ಸನ ಹೇಳುವ ಪದಗ, ಜಾತಿವಾಚಕ ಪದಗ, ವಿಸÀ ಜಂತುಗ, ಪಾತ್ರೆಗ, ಲೋಕಜ್ಞಾನ ಪದಗ, ಬೈಗುಳ ಮತ್ತೆ ಹೊಗಳಿಕೆಗ, ರೋಗಗಳ ಹೆಸರ್ಗ, ಲೋಹದ ಹೆಸರ್ಗ, ವಿಸÀವಾಚಕ, ವೃತ್ತಿ ವಾಚಕಗ, ವೇಗ, ನಿದಾನ, ಮುಳ್ಗ್, ಈಜ್, ನೀರ್ ಮೊಗೆದು, ತುಂಬ್ಸುದು ಇತ್ಯಾದಿ ಪದಗ, ಸಂಕ್ಯಾವಾಚಕಗ, ಸಸ್ಯವಾಚಕಗ, ದಿಕ್ವಾಚಕಗ, ಪಂಚಬೂತಗಳ ಹೇಳುವ ಪದಗ ಇದರೊಟ್ಟ್ಗೆ ಮೂರೂ ಬಾಗಕ್ಕೂ ಸಮ್ಮಂದ ಆವ ಗಾದೆ, ಒಗಟು, ನುಡಿಗಟ್ಟು, ನಂಬಿಕೆ ಇತ್ಯಾದಿ ಪದಗ ಸಂಗ್ರಹ ಮಾಡಿಕೆ ಸೂಚಿಸಿದೊ.
ಕನ್ನಡ ಅಕ್ಷರ ಮತ್ತು ಲಿಪಿ ಬಳಕೆ : ಅರೆಭಾಷೆಗೆಂದು ಒಂದು ಪ್ರತ್ಯೇಕ ಲಿಪಿ ಇಲ್ಲ. ಬೇರೆ ಭಾಷೆಯವರು ಅರೆಭಾಷೆಯನ್ನು ಓದುವ ಪ್ರಯುಕ್ತ ಐಪಿಎ(ಇಂಟರ್ನ್ಯಾಷನಲ್ ಫೊನೆಟಿಕ್ ಆಲ್ಫಾಬೆಟ್ಸ್) ರೋಮನ್ ಲಿಪಿ ಸಂಕೇತ ಅಕ್ಷರಗಳನ್ನು ಬಳಕೆ ಮಾಡಲಾಗಿದೆ. ಅರೆಭಾಷೆಯಲ್ಲಿ ಮಹಾಪ್ರಾಣ ಅಕ್ಷರಗಳಿಲ್ಲ. ಹಾಗಾಗಿ ಅರೆಭಾಷೆ ಪದಕೋಶದಲ್ಲಿ ಮಹಾಪ್ರಾಣ ಅಕ್ಷರಗಳಾದ ಖ, ಛ, ಠ, ಥ, ಫ ಮತ್ತು ಘ, ಝ, ಢ, ಧ, ಭ ಅಕ್ಷರಗಳಿಗೆ ಪ್ರತ್ಯೇಕ ಭಾಗಗಳಿಲ್ಲ. ಅರೆಭಾಷೆ ಪದಕೋಶದಲ್ಲಿ ೨೭ ಸಂಕ್ಷೇಪ ಅಕ್ಷರಗಳನ್ನು ಬಳಸಲಾಗಿದೆ.
- ಸಂಗ್ರಹ : ಸಂತೋಷ್