ಮಡಿಕೇರಿ, ಅ. ೧೫: ರಾಜ್ಯದ ವಿವಿಧ ಭಾಷಾ ಅಕಾಡೆಮಿಗಳ ಅಧಿಕಾರಾವಧಿ ಮುಗಿದಿದ್ದು, ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಅಕಾಡೆಮಿಗಳ ಅಧಿಕಾರಾವಧಿಯೂ ಇಂದು ಮುಕ್ತಾಯಗೊಂಡಿದೆ.
೨೦೧೯ರ ಅಕ್ಟೋಬರ್ ೧೫ ರಂದು ಕೊಡವ ಅಕಾಡೆಮಿ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಅರೆಭಾಷಾ ಅಕಾಡೆಮಿ ಲಕ್ಷಿö್ಮÃನಾರಾಯಣ ಕಜೆಗದ್ದೆ ಅವರುಗಳ ಅಧ್ಯಕ್ಷತೆಯಲ್ಲಿ ರಚನೆಗೊಂಡಿತ್ತು. ಇದೀಗ ಮೂರು ವರ್ಷಗಳ ಅವಧಿ ತಾ. ೧೫ಕ್ಕೆ ಮುಗಿದಂತಾಗಿದೆ.
ಅಧಿಕಾರಾವಧಿಯ ನಡುವೆ ಕೊರೊನಾ ಪರಿಸ್ಥಿತಿ ಉಂಟಾಗಿದ್ದರಿAದ ಕೆಲವಾರು ಉದ್ದೇಶಿತ ಯೋಜನೆ-ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಮತ್ತೆ ಒಂದಷ್ಟು ಕಾಲಾವಕಾಶ ವಿಸ್ತರಿಸುವಂತೆ ಕೆಲವು ಅಧ್ಯಕ್ಷರುಗಳು ಸರಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಆದರೆ ಸರಕಾರ ಈ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ತಿಳಿದು ಬಂದಿಲ್ಲ. ಲಲಿತಕಲಾ ಅಕಾಡೆಮಿ, ಚಿತ್ರಕಲಾ ಅಕಾಡೆಮಿ, ಜನಪದ ಅಕಾಡೆಮಿಗಳಲ್ಲೂ ಕೊಡಗಿನ ಕೆಲವು ಸದಸ್ಯರಿದ್ದು, ಇವರುಗಳ ಅಧಿಕಾರವೂ ಪೂರ್ಣಗೊಂಡAತಾಗಿದೆ.
ಕೊಡವ ಅಕಾಡೆಮಿಗೆ ಸರಕಾರ ಮೂವರು ಸದಸ್ಯರನ್ನು ಈ ಅವಧಿಯುದ್ದಕ್ಕೂ ನೇಮಕವೇ ಮಾಡದೆ ಈಗಿನ ಅವಧಿಯಲ್ಲಿ ಮೂವರ ಸದಸ್ಯರ ಸ್ಥಾನಕ್ಕೆ ವಂಚನೆಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಚ್ಚರಿ ಎಂಬAತೆ ನಾಲ್ವರು ಸದಸ್ಯರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಆದರೆ ಈ ನಾಲ್ವರು ಸದಸ್ಯರಿಗೆ ಯಾವುದೇ ಸಭೆ-ಸಮಾರಂಭ, ಕಾರ್ಯಚಟುವಟಿಕೆಗಳ ಅವಕಾಶವೇ ಸಿಗಲಿಲ್ಲ. ಬದಲಿಗೆ ಅವಧಿ ಮುಕ್ತಾಯ ಸಮಾರಂಭ ಮಾತ್ರ ಲಭ್ಯವಾಗಿತ್ತು ಎಂಬುದು ವಿಪರ್ಯಾಸಕರವಾಗಿದೆ.