ಮಡಿಕೇರಿ, ಅ. ೧೫: ಕೋಮು ವಿಚಾರದಲ್ಲಿ ಸೂಕ್ಷö್ಮ ಜಿಲ್ಲೆಯಾದ ಕೊಡಗಿನಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿ ಹಿಂದೂಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ ಮೊಬೈಲ್ ಸಂಭಾಷಣೆಯ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬAಧ ಮಡಿಕೇರಿ ನಗರಸಭಾ ಸದಸ್ಯ, ಜೆಡಿಎಸ್ ಮುಖಂಡ ಮುಸ್ತಾಫ ಅಲಿಯಾಸ್ ಮುಸ್ತು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬೆಟ್ಟಗೇರಿಯ ಅಬ್ದುಲ್ಲಾ ಎಂಬವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
೩ ನಿಮಿಷ ೧೨ ಸೆಂಕೆಡ್ಗಳ ಸಂಭಾಷಣೆಯಲ್ಲಿ ೧ ನಿಮಿಷ ೩೦ ಸೆಕೆಂಡ್ ಇಡೀ ಜಿಲ್ಲೆಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸುವುದು, ಹಿಂದೂಗಳ ಹತ್ಯೆಗೈಯುವುದು, ಕೋಮು ಸಂಘರ್ಷ ಸೃಷ್ಟಿಸಿ ರಕ್ತಪಾತ ನಡೆಸುವುದರ ಬಗ್ಗೆ ಮಲೆಯಾಳಂ ಭಾಷೆಯಲ್ಲಿ ಮುಸ್ತಾಫ ಹಾಗೂ ಅಬ್ದುಲ್ಲ್ಲಾ ನಡುವಿನ ಚರ್ಚೆ ಹಿಂದೂಗಳ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದÀನಕಾರಿ ಅಂಶಗಳಿAದ ಕೂಡಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಈ ಆಡಿಯೋ ೪ ತಿಂಗಳ ಹಿಂದೆಯೇ ‘ರೆಕಾರ್ಡ್’ ಆಗಿದ್ದು, ಮಡಿಕೇರಿಯ ನಿವಾಸಿ ಶೇಷಪ್ಪ ರೈ ಎಂಬವರು ಇದನ್ನು ಇದೀಗ ಪೊಲೀಸರಿಗೆ ನೀಡಿದ್ದಾರೆ. ಅಬ್ದುಲ್ಲಾ ಹಾಗೂ ಮುಸ್ತಾಫ ಅವರುಗಳು ಮೊಬೈಲ್ನಲ್ಲಿ ಮಾತನಾಡುವ ಸಂದರ್ಭ ಶೇಷಪ್ಪ ರೈ ಅವರು ಅಬ್ದುಲ್ಲಾ ಅವರಿಗೆ ಕರೆ ಮಾಡಿದ್ದಾರೆ. ಆ ವೇಳೆ ಕರೆ ‘ಕಟ್’ ಮಾಡುವ ಬದಲು ಸ್ವೀಕರಿಸಿದ್ದಾನೆ. ಆ ಸಂದರ್ಭ ಇಬ್ಬರ ನಡುವೆ ನಡೆಯುತ್ತಿದ್ದ ಮಾತುಗಳನ್ನು ಶೇಷಪ್ಪ ರೈ ರೆಕಾರ್ಡ್ ಮಾಡಿದ್ದಾರೆ. ಯಾವುದೇ ಗಲಭೆಗಳು ನಡೆಯಬಾರದೆಂಬ ಉದ್ದೇಶದಿಂದ ಆಡಿಯೋವನ್ನು ಬಹಿರಂಗ ಮಾಡಿರಲಿಲ್ಲ. ದೇಶದಲ್ಲಿ ಪಿಎಫ್ಐ ಸಂಘಟನೆ ನಿಷೇಧವಾದ ಬಳಿಕ ಈ ಆಡಿಯೋವನ್ನು ಗಮನವಿಟ್ಟು ಸೂಕ್ಷö್ಮವಾಗಿ ಕೇಳಿದಾಗ, ಕೋಮು ದಳ್ಳುರಿ ಸೃಷ್ಟಿಸುವ ಸಂಚು ರೂಪಿಸುವುದು ತಿಳಿದು ಬಂದಿದೆ. ಆನಂತರ ಇದನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಶೇಷಪ್ಪ ರೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಿಲ್ಲೆಯನ್ನು ಹೊತ್ತಿ ಉರಿಸಬೇಕು
ವೈರಲ್ ಆಗಿರುವ ಆಡಿಯೋ ಸಂಭಾಷಣೆಯ ಹಿಂದೆ ಕೆಲಕಾಲ ಮಾತುಕತೆ ನಡೆದಿದೆ. ಶೇಷಪ್ಪ ರೈ ಸ್ವೀಕರಿಸಿದ ಬಳಿಕದ ಆಡಿಯೋದಲ್ಲಿ ಜಿಲ್ಲೆಯನ್ನು ಹೊತ್ತಿ ಉರಿಸಬೇಕೆಂಬ ಗುರಿಯನ್ನು ಇಬ್ಬರು ಹೊಂದಿದ್ದರು ಎಂಬುದು ಸ್ಪಷ್ಟವಾಗಿದೆ.
ಮುಸ್ತಾಫ ೫೦ ಜನರ ತಂಡ ಕಟ್ಟಿ ಪೆಟ್ರೋಲ್ ಬಾಂಬ್ ಸಿಡಿಸಲು ತರಬೇತಿ ನೀಡಬೇಕು. ದುಡ್ಡಿರುವವರು ಎಲ್ಲಾ ರೂ. ೫೦ ಸಾವಿರದಿಂದ ಒಂದು ಲಕ್ಷ ಹಣ ನೀಡಬೇಕು. ಮಡಿಕೇರಿ ನಗರಕ್ಕೆ ಬಾಂಬ್ ಹಾಕಬೇಕು. ‘-- ಮಕ್ಕಳಿಗೆ’ ಪಾಠ ಕಲಿಸಬೇಕು. ನಮಗೇನಾದರು ತೊಂದರೆಯಾದರೆ ಎಲ್ಲರೂ ಬರೋಣ ಪೆಟ್ರೋಲ್ ಬಾಂಬ್ ಹಾಕೋಣ. ಮಡಿಕೇರಿಯೇ ಹೊತ್ತಿ ಉರಿಸೋಣ ಎಂದಾಗ, ಬರೀ ಮಡಿಕೇರಿಯಲ್ಲ ಇಡೀ ಜಿಲ್ಲೆಗೆ ಬೆಂಕಿ ಹಚ್ಚಬೇಕೆಂದು ಅಬ್ದುಲ್ಲಾ ಹೇಳುತ್ತಾನೆ.
(ಮೊದಲ ಪುಟದಿಂದ) ಬೇರೆ ಬೇರೆ ಜಾಗಕ್ಕೆ ಹೋಗಿ ಬಾಂಬ್ ಹಾಕೋಣ, ಅವರು ಸಾಯಲಿ, ನಾವು ಸಾಯೋಣ. ಆಗ ಅವರ ಪಾರ್ಟಿ ಲೈಫ್ ಲಾಂಗ್ ಇರಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಮುಸ್ತಾಫ ಮಾತನಾಡಿದ್ದಾನೆ. ಅದಾದ ನಂತರ ಅಬ್ದುಲ್ಲಾ ಈ ಬಾರಿ ಬಿಜೆಪಿ ಸೋಲು ಖಚಿತ. ಆಗ ಅವರಿಗೆ ತಿಳಿಯುತ್ತದೆ ಎಂದಿದ್ದಾನೆ. ಇದಕ್ಕೆ ಮುಸ್ತಾಫ ಡಿಕೆಶಿ ಮೈಂಡ್ ಹಿಂದೂತ್ವದ್ದು, ಸಿದ್ದರಾಮಯ್ಯ ಜಾತ್ಯಾತೀತತೆಯ ಮೈಂಡ್ ಎಂಬ ಮಾತುಗಳು ನಡೆದಿವೆ. ಬಳಿಕ ಬೇರೆ ವಿಚಾರ ಚರ್ಚೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಅಬ್ದುಲ್ಲಾ ಹಾಗೂ ಮುಸ್ತಾಫ ಅವರನ್ನು ಬಂಧಿಸಿ ಕ್ರಮಕೈಗೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಜನಾಂಗದ ನಡುವೆ ದ್ವೇಷ ಬಿತ್ತುವ ಆರೋಪದಡಿ ೧೫೩, ೧೫೩ ಎ, ೫೦೫/೨ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಸಮಗ್ರವಾಗಿ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.