ಗೋಣಿಕೊಪ್ಪಲು, ಅ. ೧೫: ಕಳೆದ ಐದು ವರ್ಷಗಳ ಕಾಲ ವಿವಿಧ ಕಾರಣಗಳಿಂದ ನಿಲುಗಡೆಗೊಂಡಿದ್ದ ಪ್ರತಿಷ್ಠಿತ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮುಂಚಿತವಾಗಿ ಇದೀಗ ೫ಂ ಸೈಡ್ ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಹಾಕಿ ಪಂದ್ಯಾವಳಿಯ ಮೂಲಕ ಚಾಲನೆ ನೀಡಲಾಗುತ್ತಿದೆ. ತಾ. ೨೭ ರಿಂದ ನ.೭ ರವರೆಗೆ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದೆ.
ಇದರಿಂದ ಅಸಂಖ್ಯಾತ ಕ್ರೀಡಾಭಿಮಾನಿಗಳಿಗೆ ಮತ್ತೆ ಹಾಕಿ ಪಂದ್ಯವನ್ನು ದ. ಕೊಡಗಿನ ಪ್ರಮುಖ ಪಟ್ಟಣವಾದ ಪೊನ್ನಂಪೇಟೆಯಲ್ಲಿ ವೀಕ್ಷಿಸುವ ಅವಕಾಶ ದೊರೆಯಲಿದೆ.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜನಕ ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ೫ ಮಂದಿ ಆಟಗಾರರು
(ಮೊದಲ ಪುಟದಿಂದ) ಹಾಕಿ ಆಡುವ ಪಂದ್ಯಾವಳಿ ನಡೆಸಲು ಕೊಡವ ಹಾಕಿ ಅಕಾಡೆಮಿ ಮುಂದೆ ಬಂದಿದೆ.
ಗೋಣಿಕೊಪ್ಪಲುವಿನ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಪಂದ್ಯಾವಳಿಯ ಲೋಗೋ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅಂತರರಾಷ್ಟಿçÃಯ ಹಾಕಿ ಪಟು ಮಾಜಿ ಒಲಂಪಿಯನ್ ಬಾಳೆಯಡ ಸುಬ್ರಮಣಿ, ಕೊಡಗಿನಲ್ಲಿ ೮೦ ಕುಟುಂಬಗಳಿAದ ಆರಂಭವಾದ ಹಾಕಿ ಪಂದ್ಯಾವಳಿ ೩೦೦ಕ್ಕೂ ಅಧಿಕ ಕೊಡವ ಕುಟುಂಬಗಳು ಭಾಗವಹಿಸುವ ಮಟ್ಟಿಗೆ ಬೆಳೆದು ರಾಷ್ಟçದ ಗಮನವನ್ನು ಸೆಳೆದಿದೆ.
ಹಾಕಿ ಜನಕ ಪಾಂಡAಡ ಕುಟ್ಟಪ್ಪನವರ ಪರಿಕಲ್ಪನೆಯಿಂದ ಮೂಡಿಬಂದ ಹಾಕಿ ಪಂದ್ಯಾವಳಿ ಸಾಕಷ್ಟು ಹೆಸರನ್ನು ಮಾಡಿದೆ. ಇವರ ನಿಧನ ನಂತರ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ, ಕೊರೊನಾ ಮಹಾಮಾರಿಯಿಂದ ನಂತರ ವರ್ಷಗಳಲ್ಲಿ ಹಾಕಿ ಪಂದ್ಯಾವಳಿ ನಡೆಯಲಿಲ್ಲ, ಇದೀಗ ಕೊಡವ ಹಾಕಿ ಅಕಾಡೆಮಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮುಂದೆ ಬಂದಿದೆ, ಪ್ರತಿ ವರ್ಷವೂ ಹಾಕಿ ಪಂದ್ಯಾವಳಿ ನಡೆಯಲಿ ಎಂದು ಆಶಿಸಿದರು.
ಕೊಡವ ಹಾಕಿ ಅಕಾಡೆಮಿಯ ನೂತನ ಅಧ್ಯಕ್ಷರಾದ ಪಾಂಡAಡ ಬೋಪಣ್ಣ ಮಾತನಾಡಿ ಹತ್ತು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ೧೦೭ ಕುಟುಂಬಗಳು ನೋಂದಾವಣೆ ಮಾಡಿಕೊಂಡಿದ್ದು, ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಪಂದ್ಯಾವಳಿ ನಡೆಯಲಿದೆ. ಕೊಡವ ಹಾಕಿ ಅಕಾಡೆಮಿ ಪಂದ್ಯಾವಳಿ ಯಶಸ್ವಿಗೆ ಶ್ರಮಿಸುತ್ತಿದೆ. ಪಾಂಡAಡ ಕುಟ್ಟಪ್ಪ ನಿಧನದ ನಂತರ ಯಾವುದೇ ಚಟುವಟಿಕೆ ನಡೆದಿಲ್ಲ, ಹಾಕಿ ಅಕಾಡೆಮಿ ವತಿಯಿಂದಲೂ ನೇರವಾಗಿ ಪಂದ್ಯಾವಳಿ ನಡೆಯಲಿಲ್ಲ. ಹೀಗಾಗಿ ಪಾಂಡAಡ ಕುಟ್ಟಪ್ಪ ಅವರ ನೆನಪಿನಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಪಂದ್ಯಾವಳಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರಾದ ಕುಕ್ಕೆರ ಜಯ ಚಿಣ್ಣಪ್ಪ, ೧೯೯೭ ರಿಂದ ೨೦೧೮ರ ವರೆಗೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ, ಇದರಿಂದ ಅನೇಕ ಕುಟುಂಬಗಳು ಒಂದಾಗಿವೆ, ಹಲವಾರು ಕ್ರೀಡಾಪಟುಗಳಿಗೆ ಉದ್ಯೋಗ ದೊರೆತಿದೆ. ನಂತರದ ವರ್ಷಗಳಲ್ಲಿ ಕೆಲವು ಕಾರಣಗಳಿಂದ ಪಂದ್ಯಾವಳಿ ನಡೆಸಲು ಸಾಧ್ಯವಾಗಲಿಲ್ಲ ಎಂದರು.
ಹಾಕಿ ಕೂರ್ಗ್ ಹಾಗೂ ಅಂಪೈರ್ ಅಸೋಸಿಯೇಷನ್‌ಗೆ ಯಾವುದೇ ಜಾತಿ, ಭೇದವಿಲ್ಲ, ಎಲ್ಲಿ ಪಂದ್ಯಾವಳಿ ನಡೆದರೂ ಅಂಪೈರ್ ಭಾಗವಹಿಸಿ ಪ್ರೋತ್ಸಾಹ ಮಾಡುತ್ತೇವೆ ಎಂದು ಹಾಕಿ ಅಂಪೈರ್ ಅಸೋಸಿಯೇಷನ್ ಕಾರ್ಯದರ್ಶಿ ಅಂಜಪರವAಡ ಕುಶಾಲಪ್ಪ ತಿಳಿಸಿದರು, ಕೊಡವ ಹಾಕಿ ಅಕಾಡೆಮಿ ನಡೆಸುವ ಪಂದ್ಯಾವಳಿಯಲ್ಲಿ ಅಂಪೈರ್ ಅಸೋಸಿಯೇಷನ್ ಸಂಪೂರ್ಣವಾಗಿ ಭಾಗವಹಿಸಿ ಪ್ರೋತ್ಸಾಹ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಮಾದಂಡ ಎಸ್. ಪೂವಯ್ಯ, ಬಡಕಡ ದೀನಾ ಪೂವಯ್ಯ, ಕಾರ್ಯಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಮುಕ್ಕಾಟಿರ ಬೀಮಯ್ಯ, ನಿರ್ದೇಶಕರುಗಳಾದ ಕಂಬೀರAಡ ರಾಕಿ ಪೂವಣ್ಣ, ಚೇನಂಡ ಸುರೇಶ್ ನಾಣಯ್ಯ, ಚೆಯ್ಯಂಡ ಸತ್ಯ, ಕಲಿಯಂಡ ಸಂಪನ್ ಅಯ್ಯಪ್ಪ, ಕುಲ್ಲೇಟಿರ ಅರುಣ ಬೇಬ, ಕುಯಿಮಂಡ ಕಿರಣ್ ಕುಮಾರ್, ಮರ್ಚಂಡ ಗಣೇಶ್ ಪೊನ್ನಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ನಿರ್ದೇಶಕರಾದ ಕಂಬಿರAಡ ರಾಕಿ ಪ್ರಾರ್ಥಿಸಿ, ನೆರ್ಪಂಡ ಹರ್ಷ ಮಂದಣ್ಣ ನಿರೂಪಿಸಿ, ವಂದಿಸಿದರು. -ಹೆಚ್.ಕೆ. ಜಗದೀಶ್