ಪೊನ್ನAಪೇಟೆ, ಅ.೧೫: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆಲೆ ಸಮೀಪದ ಮಲ್ಲೂರು ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಬಳಸಲು ಇಟ್ಟಿದ್ದ ಬೆಲೆ ಬಾಳುವ ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡಿ ಗೂಡ್ಸ್ ಆಟೋ (ಕೆ.ಎ.೦೨,ಡಿ ೫೮೩೯) ದಲ್ಲಿ ತುಂಬಿಸಿಕೊAಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ ಪೊನ್ನಂಪೇಟೆ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ಕೆ.ಪಿ.ಮುರುಳಿ, ಹೆಚ್.ಎಸ್.ಷರೀಫ್ ಮತ್ತು ಮುತ್ತ ಬಂಧಿತ ಆರೋಪಿಗಳಾಗಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಪಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಅವರ ನಿರ್ದೇಶನದ ಮೇರೆಗೆ, ಡಿವೈಎಸ್ಪಿ ನಿರಂಜನ ರಾಜೇ ಅರಸ್, ವೃತ್ತ ನಿರೀಕ್ಷಕ ಗೋವಿಂದ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಉಪ ನಿರೀಕ್ಷಕ ಹೆಚ್.ಸಿ.ಸುಬ್ರಮಣಿ, ಎಎಸ್ಐ ಸುಂದರೇಶ್, ಸಿಬ್ಬಂದಿ ಎಸ್.ಬಿ. ಮಹದೇಶ್ವರ ಸ್ವಾಮಿ, ಭರತ್ ಕುಮಾರ್, ಸಂತೋಷ್, ರಮ್ಯಾ ಭಾಗವಹಿಸಿದ್ದರು.