ಸೋಮವಾರಪೇಟೆ, ಅ. ೧೫: ಹಣದ ವಿಚಾರಕ್ಕೆ ಸಂಬAಧಿಸಿದAತೆ ಮಾತಿನ ಚಕಮಕಿ ನಡೆದು ಚಾಕುವಿನಿಂದ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

ನಂದಿಗುAದ ಗ್ರಾಮದ ಮಹೇಶ್ ಹಾಗೂ ವಸಂತ್ ನಡುವೆ ಹಣದ ವಿಚಾರಕ್ಕೆ ಸಂಬAಧಿಸಿದAತೆ ನಿನ್ನೆ ರಾತ್ರಿ ಜಗಳ ಏರ್ಪಟ್ಟಿದ್ದು, ಈ ಸಂದರ್ಭ ವಸಂತ್ ತನ್ನ ಬಳಿಯಿದ್ದ ಚಾಕುವಿನಿಂದ ಮಹೇಶ್ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹೇಶ್‌ನ ಪತ್ನಿ ಮಂಜುಳಾ ಅವರು ಅದೇ ಗ್ರಾಮದ ವಸಂತ್‌ನಿAದ ರೂ. ೧೫೦೦ ಸಾಲ ಪಡೆದಿದ್ದು, ಇದನ್ನು ತಾ. ೧೫ರಂದು ಹಿಂತಿರುಗಿಸುವುದಾಗಿ ಹೇಳಿದ್ದರು. ಆದರೆ ನಿನ್ನೆ ರಾತ್ರಿ ಮನೆಯ ಬಳಿ ಬಂದ ವಸಂತ್ ಹಣ ನೀಡುವಂತೆ ಜಗಳ ತೆಗೆದಿದ್ದಾನೆ. ಈ ಸಂದರ್ಭ ಬೆಳಿಗ್ಗೆ ನೀಡುವುದಾಗಿ ತಿಳಿಸಿದರೂ ಕೇಳದೇ ಚಾಕುವಿನಿಂದ ಎದೆ ಹಾಗೂ ಕೆನ್ನೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾಗಿ ಆರೋಪಿಸಿ, ಪೊಲೀಸರಿಗೆ ದೂರು ನೀಡಲಾಗಿದೆ.

ಗಾಯಾಳುವನ್ನು ಶನಿವಾರಸಂತೆ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಗೆ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ಆಗಮಿಸಿ ಗಾಯಾಳುವಿನಿಂದ ಹೇಳಿಕೆ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.