ಮಡಿಕೇರಿ, ಅ. ೧೫: ಕಾವೇರಿ ತೀರ್ಥೋದ್ಭವ ಹಿನ್ನೆಲೆ ಭಾಗಮಂಡಲದಲ್ಲಿ ನಡೆದ ಸಾರ್ವಜನಿಕ ಪೂರ್ವಭಾವಿ ಸಭೆಯಲ್ಲಿ ಅರ್ಧದಲ್ಲಿಯೇ ನಿರ್ಗಮಿಸಿದ ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರ ಕ್ರಮವನ್ನು ವೀರಾಜಪೇಟೆ ಕೊಡವ ಸಮಾಜ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಕುಂಬೆರ ಮನುಕುಮಾರ್ ಹಾಗೂ ಆಡಳಿತ ಮಂಡಳಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿ ಅಧಿಕಾರಿಗಳು ನಡೆದುಕೊಳ್ಳದೆ ಜಿಲ್ಲೆಯ ಕೊಡವ ಜನಾಂಗದೊAದಿಗೆ ಹೊಂದಾಣಿಕೆಯಿAದ ಕರ್ತವ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದೆ.