ಮಡಿಕೇರಿ, ಅ. ೧೫: ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ಹಾಪ್ಕಾಮ್ಸ್ ನೂತನ ಹೈಟೆಕ್ ಮಾರಾಟ ಮಳಿಗೆಯ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ತಾ. ೧೮ ರವರೆಗೆ ೪ ದಿನಗಳ ಕಾಲ ಶೇ. ೧೦ ರಿಯಾಯಿತಿ ದರದಲ್ಲಿ ತರಕಾರಿ, ಹಣ್ಣು, ಸಂಬಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ಹಾಪ್ಕಾಮ್ಸ್ ಅಧ್ಯಕ್ಷರು ಕೋರಿದ್ದಾರೆ. ಮಾಹಿತಿಗೆ ದೂ.೦೮೨೭೨-೨೦೦೮೩೭ನ್ನು ಸಂಪರ್ಕಿಸಬಹುದು.