*ಸಿದ್ದಾಪುರ, ಅ. ೧೫: ಒಂಟಿಯAಗಡಿಯಿAದ ಸಿದ್ದಾಪುರ ಮಾರ್ಗವಾಗಿ ತೆರಳುವ ರಸ್ತೆ ಕುಸಿದಿದ್ದು, ಆತಂಕದ ನಡುವೆ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂಟಿಯAಗಡಿಯಿAದ ಸುಮಾರು ೧೫೦ ಮೀಟರ್ ದೂರದಲ್ಲಿ ನೂತನ ಮೋರಿ ನಿರ್ಮಾಣವಾಗುತ್ತಿದ್ದು, ಹಳೆಯ ರಸ್ತೆ ಹಾಗೂ ನೂತನ ರಸ್ತೆಯ ಮಧ್ಯೆ ಬೃಹತ್ ಹೊಂಡ ನಿರ್ಮಾಣವಾಗಿದೆ. ಅಸಮರ್ಪಕ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಮಕ್ಕಳು, ಪಾದಚಾರಿಗಳು ಪರದಾಡುವಂತಾಗಿದ್ದು, ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಕಿರಿದಾದ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.