*ಗೋಣಿಕೊಪ್ಪ, ಅ. ೧೪: ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮಿಸ್ ಇಂಡಿಯಾ ವಿಭಾಗಕ್ಕೆ ಕುಪ್ಪಣಮಾಡ ಮೇಘನ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯ ೯ನೇ ತರಗತಿ ವಿದ್ಯಾರ್ಥಿಯಾಗಿರುವ ಮೇಘನ ಬೆಂಗಳೂರಿನಲ್ಲಿ ನಡೆದ ವಾಲ್ ಆಫ್ ಫೇಮ್ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದು ಮಿಸ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಳೆ. ಗೋಣಿಕೊಪ್ಪ ಅರುವತ್ತೊಕ್ಲು ಗ್ರಾಮದ ನಿವಾಸಿಯಾಗಿರುವ ಕೆ.ಪಿ. ಚಾಮಿ ಮತ್ತು ಕೆ.ಎಂ. ಜಾನ್ಸಿ ಅವರ ಪುತ್ರಿಯಾಗಿದ್ದಾಳೆ.