ಮಡಿಕೇರಿ, ಅ. ೧೫: ಶೈಕ್ಷಣಿಕವಾಗಿ ಸಾಧನೆಗೈದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಜಿಲ್ಲೆಯ ಮೂವರು ಪತ್ರಕರ್ತರ ಮಕ್ಕಳು ಪಡೆದುಕೊಂಡರು.

ಗೋಣಿಕೊಪ್ಪಲುವಿನ ವಿ.ವಿ. ಅರುಣ್ ಕುಮಾರ್ ಪುತ್ರ ವಿ.ಎ. ಚಿಂತನ್, ಮಡಿಕೇರಿಯ ಎಚ್.ಬಿ. ಯಶೋಧ ಅವರ ಪುತ್ರ ಎಂ.ಎ. ಧರುಣ್ ಪ್ರಶೋಬ್ ಹಾಗೂ ಗುಡ್ಡೆಹೊಸೂರಿನ ಗಣೇಶ್ ಕುಡೆಕಲ್ ಅವರ ಪುತ್ರಿ ಕೆ.ಜಿ. ಶಿವಾನಿ ಪುರಸ್ಕಾರಕ್ಕೆ ಭಾಜನರಾದರು.

ಬೆಂಗಳೂರಿನ ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ. ಸೋಮಣ್ಣ, ಶಂಕರೇಗೌಡ, ಚಿತ್ರನಟಿ ತಾರ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.