ಮಡಿಕೇರಿ, ಅ. ೧೪: ಕೊಡಗಿನ ವರ್ಷದ ಮೊದಲ ಬೇಡುಹಬ್ಬ ಮತ್ತು ಕುದುರೆ ಹಬ್ಬವು ಮನೆಯಪಂಡ ಮತ್ತು ಸಣ್ಣುವಂಡ ಕುಟುಂಬಗಳ ಆಶ್ರಯದಲ್ಲಿ ನಡೆಯಲಿದೆ. ತಾ. ೧೭ರಂದು ರಾತ್ರಿ ಬೇಡುಹಬ್ಬ, ತಾ. ೧೮ರಂದು ಎರಡು ಕುಟುಂಬಸ್ಥರ ಐನ್ ಮನೆಗಳಿಂದ ದೇವರ ಕುದುರೆಗಳು ಮುಗುಟಗೇರಿ ಗ್ರಾಮದ ಕುಂದಬೆಟ್ಟಕ್ಕೆ ತಂದು ಮಧ್ಯಾಹ್ನ ೧ ಗಂಟೆಗೆ ಕುಂದಬೆಟ್ಟದ ಈಶ್ವರ ದೇವರ ಸನ್ನಿಧಿಯಲ್ಲಿ ಹಬ್ಬವನ್ನು ವಿಜೃಂಭಣೆಯಿAದ ನಡೆಸ ಲಾಗುವುದು ಎಂದು ಬೆಟ್ಟದ ಮಹಾದೇವರ ತಕ್ಕ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ತಿಳಿಸಿದೆ.