ನಾಪೋಕ್ಲು, ಅ. ೧೫: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರೂರು ಗ್ರಾಮದಲ್ಲಿ ೧೩ ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗÀ ತಜ್ಞ ಮೂರ್ನಾಡಿನ ಪ್ರಜ್ವಲ್ ಕುಮಾರ್ ಸೆರೆಹಿಡಿದಿದ್ದಾರೆ.
ಪೆರೂರು ಗ್ರಾಮದ ತೆಕ್ಕಡ ದೊರೆ ಎಂಬವರ ಮನೆಯ ಸಮೀಪ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪ್ರಜ್ವಲ್ ಕುಮಾರ್ ಸರ್ಪವನ್ನು ಸೆರೆಹಿಡಿದು ಅರಣ್ಯ ಅಧಿಕಾರಿಗಳ ನೆರವಿನಿಂದ ಭಾಗಮಂಡಲ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಭಾಗಮಂಡಲ ಅರಣ್ಯ ಇಲಾಖೆ ಅಧಿಕಾರಿ ಕೊಟ್ರೇಶ್ ಮತ್ತು ಸಿಬ್ಬಂದಿಗಳು ಇದ್ದರು. ಪ್ರಜ್ವಲ್ ಕುಮಾರ್ ಅವರ ಮೊಬೈಲ್ ಸಂಖ್ಯೆ ೯೭೪೦೩೦೪೩೩೮.