ದಕ್ಷಿಣದ ಭಾಗೀರಥಿ, ಕೊಡಗು, ಕನ್ನಡ ನಾಡಿನ ಸಿರಿದೇವಿ, ಕಾವೇರಿ, ಕರ್ನಾಟಕದ ಕಣ್ಮಣಿ, ತಮಿಳುನಾಡಿನ ತವನಿಧಿಯಾಗಿ ನಾನೂರ ಎಪ್ಪತ್ತೆöÊದು ಮೈಲುಗಳ ದೂರ ಹರಿದು, ಎರಡೂ ರಾಜ್ಯಗಳ ಭಾಗ್ಯಧಾತೆಯಾಗಿ, ಹರಿವ ಕಡೆಯೆಲ್ಲಾ ಬೆಳೆ, ಬೆಳಕು, ಬದುಕು, ಚೆಲುವು, ಸಮೃದ್ಧಿಯನ್ನು ಉಂಟು ಮಾಡುವಳು ಕಾವೇರಿ.
ಗದ್ಯ ಪದ್ಯ ನಾಟಕಗಳಲ್ಲಿ ಕಾವೇರಿಯ ಗುಣಗಾನವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡನಾಡಿನ ಸೀಮೆಯನ್ನು ಸಾವಿರ ವರ್ಷಗಳ ಹಿಂದೆಯೇ ನೃಪತುಂಗನು ಗುರುತಿಸಿದ್ದ. ತಮಿಳುನಾಡಿನಲ್ಲಿ ಕಾವೇರಿಯನ್ನು ‘ಚತುರ್ಮುಖ ಬ್ರಹ್ಮನಿಗೆ ಸರಿಸಾಟಿಯಾದುದು’ ಎಂದು ಹೇಳಿ ‘ಪೊನ್ನಿಮಾನದಿ’ ಎಂದು ತಮಿಳಿನ ಮಹಾಕವಿ ವರ್ಣಿಸಿದ್ದಾರೆ.
ರಾಜರ್ಷಿ ಕವೇರನ ತಪಸ್ಸಿಗೆ ಮೆಚ್ಚಿ ಅವನಿಂದ ಮಾನಸ ಪುತ್ರಿಯಾದ ವಿಷ್ಣು ಮಾಯೆಯನ್ನು ಪಡೆದನು. ಕವೇರನ ಸಾಕು ಮಗಳಾದ ಕಾರಣ ಕಾವೇರಿ ಎಂಬ ಹೆಸರು ಪಡೆದಳು. ಜಲರೂಪದಲ್ಲಿ ಲೋಕ ಕಲ್ಯಾಣಕ್ಕಾಗಿ ಹರಿದು ಲೋಪಮುದ್ರೆಯಾಗಿ ಅಗಸ್ತö್ಯನನ್ನು ವರಿಸಿದಳು. ಬ್ರಹ್ಮನು ಶಂಖದಲ್ಲಿ ತಂದಿದ್ದ ವಜ್ರ ನದಿಯು ನೀರಿನಲ್ಲಿ ಬೆರೆತದ್ದರಿಂದ ಕಾವೇರಿಯನ್ನು ಶಂಖತೀರ್ಥವೆAದೂ, ಅಮಲಕ ವೃಕ್ಷದ ರೂಪದಲ್ಲಿ ವಿಷ್ಣುವನ್ನು ಸೇವಿಸಿದ ವಜ್ರ ನದಿಯು ನೀರಿನೊಂದಿಗೆ ಬೆರೆತದ್ದರಿಂದ ಅಮಲಕ ತೀರ್ಥ ಪವಿತ್ರ ತೀರ್ಥ ಎಂಬ ಖ್ಯಾತಿ ಗಳಿಸಿತು.
ಸಪ್ತ ಋಷಿಗಳು ತಪಗೈದು ಪವಿತ್ರಗೊಳಿಸಿದ ಪ್ರದೇಶ ಕೊಡಗು. ಅಗಸ್ತö್ಯರು ನೆಲೆಸಿದ ಪುಣ್ಯ ಭೂಮಿಯಲ್ಲಿ ಕಾವೇರಿ ಬ್ರಹ್ಮಕುಂಡದಿAದ ಹೊರಡುತ್ತಾಳೆ. ‘‘ಮುಗಿಲಲಿ ಮಿಂಚಿನೋಲ್ ಹೊಳೆ ಹೊಳೆದು’’ ಕಾವೇರಿ ಪ್ರತ್ಯಕ್ಷವಾಗುತ್ತಾಳೆ. ೧೩೫೫ ಅಡಿ ಎತ್ತರದ ಬ್ರಹ್ಮಗಿರಿಯಲ್ಲಿ ಶಿಖರದ ತುದಿಯಿಂದ ನೂರು ಮೀ. ಆಳದಲ್ಲಿರುವ ಪುಷ್ಕರಣಿಯೇ ಕಾವೇರಿ ಪುಷ್ಕರಣಿ. ಪ್ರತೀ ವರ್ಷ ಶ್ರಾವಣದಲ್ಲಿ ಕಾವೇರಿ ಉತ್ಸವ ನಡೆಯುತ್ತದೆ. ಶ್ರೀರಂಗ ಸಮುದ್ರ, ಕನ್ನಂಬಾಡಿ, ಶ್ರೀರಂಗಪಟ್ಟಣ ಹಲವು ಸ್ಥಳಗಳಲ್ಲಿ ಹರಿದು ಮುಂದೆ ತಲಕಾಡು, ಶಿವನ ಸಮುದ್ರ, ಆರ್ಕಾವತಿ ಕೂಡಿಕೊಳ್ಳುವಳು.
ತಮಿಳುನಾಡಿನಲ್ಲಿ ಗಡಿಯೊಳಗೆ ಕಾವೇರಿ ಮೊಟ್ಟ ಮೊದಲು ಕಾಣಿಸಿಕೊಳ್ಳುವುದು ಹೊಗೇನಕಲ್ಲು ಎಂಬಲ್ಲಿ, ೧೦೦ ಅಡಿ ಎತ್ತರದಿಂದ ಧುಮುಕುತ್ತಾಳೆ. ಮುಂದೆ ಸೇಲಂ, ಮೆಟ್ಟೂರಿನಲ್ಲಿ ಸಂಚರಿಸಿ, ತಂಜಾವೂರು ಪ್ರವೇಶಿಸಿ ತಮಿಳುನಾಡಿನಲ್ಲಿ ಹದಿನಾರೂವರೆ ಲಕ್ಷ ಎಕರೆಗಳಷ್ಟು ಭೂಮಿಯ ಬೇಸಾಯಕ್ಕೆ ನೆರವಾಗಿದ್ದಾಳೆ. ಇದು ಕರ್ನಾಟಕಕ್ಕಿಂತ ಐದಾರು ಪಟ್ಟು ಹೆಚ್ಚು.
ಕರ್ನಾಟಕದಲ್ಲಿ ಕೊಡಗು, ಹಾಸನ, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಜನರು ಕಾವೇರಿಗೆ ಕೃತಜ್ಞರಾಗಲೇಬೇಕು. ಲಕ್ಷಗಟ್ಟಲೆ ಎಕರೆಗಳಷ್ಟು ಭೂಮಿಯ ಸಾಗುವಳಿಗೆ ನೀರಾವರಿ ಸೌಲಭ್ಯಗಳು ದೊರೆಯುವುದು ಕಾವೇರಿಯಿಂದ. ಕರ್ನಾಟಕದಲ್ಲಿ ಕಾವೇರಿ ಹಿರಿಮೆಯಿಂದ ಪ್ರಸಿದ್ಧವಾದ ಕ್ಷೇತ್ರಗಳು ಹತ್ತಾರು. ತಲಕಾವೇರಿ, ಭಾಗಮಂಡಲ, ರಾಮನಾಥಪುರ ಇಲ್ಲಿ ರಾಮೇಶ್ವರ, ಅಗಸ್ತೆö್ಯÃಶ್ವರ ಮಂದಿರಗಳಿವೆ.
ದಕ್ಷಿಣ ಪಥದಲ್ಲಿ ಎದ್ದುಬಿದ್ದ ಅನೇಕ ಸಾಮ್ರಾಜ್ಯಗಳ ಜೀವಂತ ಸಾಕ್ಷಿ ಕಾವೇರಿ. ಗಂಗ ಮತ್ತು ಹೊಯ್ಸಳ ಸಾಮ್ರಾಜ್ಯಗಳು ಕಾವೇರಿಯಿಂದ ಪೋಷಿಸಲ್ಪಟ್ಟಿವೆ. ವಿಜಯನಗರದ ವಿಸ್ತಾರ ಮತ್ತು ವೈಭವದ ದಿನಗಳನ್ನೂ ಕಾವೇರಿ ಕಂಡಿದೆ. ಚೋಳ ಸಾಮ್ರಾಜ್ಯ ಅರಳಿದ್ದು, ಕಾವೇರಿ ತೀರದಲ್ಲಿ, ಒಂಭತ್ತನೇ ಶತಮಾನದ ರಾಜ ರಾಜನನ್ನು ‘ಪೊನ್ನಾಯಿನ್ ಶೆಲ್ವನ್’ ಎಂದೇ ಅಭಿಮಾನದಿಂದ ಕರೆಸಿಕೊಳ್ಳುತ್ತಿದ್ದ ಭಾರತೀಯ ಸಂಸ್ಕೃತಿಯ ವಿಕಾಸಕ್ಕೆ ಕಾವೇರಿ ಕೃಪಾಪೋಷಿತ ದಾಕ್ಷಿಣಾತ್ಸರ ಕೊಡುಗೆ ಅಪಾರವಾದುದು.
ಪ್ರತೀ ವರ್ಷದಂತೆ ಈ ಕಾವೇರಿ ಸಂಕ್ರಮಣವು ಅ. ೧೭ರಂದು ನಡೆಯುತ್ತಿದೆ. ತೀರ್ಥರೂಪಿಣಿ ಆದಿಶ್ರೀ ಕಾವೇರಿಯ ದರ್ಶನ ಭಾಗ್ಯ ದೊರೆಯುತ್ತದೆ. ಅಪಾರ ಸಂಖ್ಯೆಯ ಭಕ್ತರು ಅಂದು ಕಾವೇರಿಯ ಪವಿತ್ರ ಜಾತ್ರೆಗೆ ಸೇರಲಿದ್ದಾರೆ. ಕಾವೇರಿ ಮಾತೆ ಸಕಲರಿಗೂ ಶುಭವನ್ನುಂಟುಮಾಡಲಿ, ಜಾತ್ರೆಯಲ್ಲಿ ಭಾಗಿಯಾಗಿ ಪುನೀತರಾಗೋಣ.
-ಹರೀಶ್ ಸರಳಾಯ, ಮಡಿಕೇರಿ. ಮೊ.೯೭೩೧೮೧೦೨೫೦