*ಗೋಣಿಕೊಪ್ಪ, ಅ. ೧೩: ರೂ. ೮೨೦೮.೯೪ ಲಕ್ಷಗಳ ವಾರ್ಷಿಕ ವಹಿವಾಟು ನಡೆಸುವ ಮೂಲಕ ಸಂಘ ರೂ. ೩೭.೧೭ ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾಹಿತಿ ನೀಡಿದರು.
ಸಂಘದ ೪೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬ್ಯಾಂಕಿನ ವಹಿವಾಟಿನ ಲಾಭಾಂಶವನ್ನು ಪರಿಗಣಿಸಿ ಸದಸ್ಯರಿಗೆ ಶೇ. ೧೬ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಘವು ೯೮೨ ಸದಸ್ಯರುಗಳನ್ನು ಹೊಂದಿದ್ದು, ಪಾಲು ಬಂಡವಾಳ ರೂ. ೮೯.೧೦ ಲಕ್ಷ, ಸಂಘದ ಕ್ಷೇಮನಿಧಿ ಮತ್ತು ಇತರ ನಿಧಿ ರೂ. ೧೪೦.೯೧ ಲಕ್ಷ, ಠೇವಣಾತಿಗಳ ರೂ. *ಗೋಣಿಕೊಪ್ಪ, ಅ. ೧೩: ರೂ. ೮೨೦೮.೯೪ ಲಕ್ಷಗಳ ವಾರ್ಷಿಕ ವಹಿವಾಟು ನಡೆಸುವ ಮೂಲಕ ಸಂಘ ರೂ. ೩೭.೧೭ ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾಹಿತಿ ನೀಡಿದರು.
ಸಂಘದ ೪೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬ್ಯಾಂಕಿನ ವಹಿವಾಟಿನ ಲಾಭಾಂಶವನ್ನು ಪರಿಗಣಿಸಿ ಸದಸ್ಯರಿಗೆ ಶೇ. ೧೬ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಘವು ೯೮೨ ಸದಸ್ಯರುಗಳನ್ನು ಹೊಂದಿದ್ದು, ಪಾಲು ಬಂಡವಾಳ ರೂ. ೮೯.೧೦ ಲಕ್ಷ, ಸಂಘದ ಕ್ಷೇಮನಿಧಿ ಮತ್ತು ಇತರ ನಿಧಿ ರೂ. ೧೪೦.೯೧ ಲಕ್ಷ, ಠೇವಣಾತಿಗಳ ರೂ. ಗೃಹ ನಿರ್ಮಾಣ ಸಾಲ ಮತ್ತು ಹಳೆಯ ವಾಹನ ಖರೀದಿ ಸಾಲವನ್ನು ನೀಡಲಾಗುತ್ತಿದೆ. ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ೭ನೇ ತರಗತಿ, ೧೦ನೇ ತರಗತಿ, ದ್ವಿತೀಯ ಪಿ.ಯು.ಸಿ. ಮತ್ತು ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಮಹಾಸಭೆಯಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಎಸ್.ಕೆ. ಮಂದಣ್ಣ, ನಿರ್ದೇಶಕರುಗಳಾದ ಸಿ.ಎಸ್. ಬೋಪಣ್ಣ, ಹೆಚ್.ಡಿ. ಶ್ರೀನಿವಾಸ್, ಎಂ.ಟಿ. ಅಯ್ಯಪ್ಪ, ಕೆ.ಬಿ. ಉತ್ತಪ್ಪ, ಪಿ.ಡಿ. ದಿನೇಶ್, ಬಿ.ಎ. ದುಗ್ಗಪ್ಪ, ಕೆ.ವಿ. ಮುತ್ತಣ್ಣ, ಸಿ.ಜೆ. ರೂಪ, ಕೆ.ಎಂ. ಕಾವೇರಮ್ಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಪ್ರದೀಪ್ ಮತ್ತು ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರು ಮತ್ತು ಸಂಘದ ಸದಸ್ಯರು ಹಾಜರಿದ್ದರು.