ಮಡಿಕೇರಿ, ಅ. ೧೩: ಕೊಡಗಿನ ವಿ.ಬಿ. ವೈಶಾಲಿ ಅವರನ್ನು ಕರ್ನಾಟಕ ರಾಜ್ಯ ಸರ್ಕಾರವು ಸಹಾಯಕ ಸರ್ಕಾರಿ ಅಭಿಯೋಜಕರು, ಸಹಾಯಕ ಸರ್ಕಾರಿ ವಕೀಲರನ್ನಾಗಿ ನೇಮಿಸಿ ವೀರಾಜಪೇಟೆಯ ಅಧಿಕ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಸ್ಥಳ ನಿಯುಕ್ತಿಗೊಳಿಸಿದೆ.

ತಾ. ೬ ರಂದು ಆದೇಶಿಸಿದ್ದು, ಹುದ್ದೆಯ ಪ್ರಬಾರವನ್ನು ವಹಿಸಿಕೊಂಡಿದ್ದಾರೆ. ವೈಶಾಲಿ ಅವರು ಮಡಿಕೇರಿಯ ನ್ಯಾಯಾಲಯದಲ್ಲಿ ೨೦೦೭ ರಿಂದ ವಕೀಲ ವೃತ್ತಿಯನ್ನು ನಡೆಸುತ್ತಿದ್ದಾರೆ. ಇವರು ಸುಂಟಿಕೊಪ್ಪ ಹೋಬಳಿ ಉಲುಗುಲಿ ಗ್ರಾಮದ ಎನ್.ಬಿ.ಮಧು ಅವರ ಪತ್ನಿ ಹಾಗೂ ಅಮ್ಮತ್ತಿ-ಕಾರ್ಮಾಡು ಗ್ರಾಮದ ವಿ.ಭೈರಪ್ಪ ಅವರ ಪುತ್ರಿಯಾಗಿದ್ದಾರೆ.