ಮಡಿಕೇರಿ, ಅ. ೧೪: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ವತಿಯಿಂದ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾಟತಾ. ೧೬ ರಂದು (ನಾಳೆ) ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪುರುಷರ ಹಾಗೂ ಮಹಿಳೆಯರಿಗೆ ಸಿಂಗಲ್ ಹಾಗೂ ಡಬಲ್ಸ್ ಓಪನ್, ಮಿಕ್ಸ್ಡ್ ಡಬಲ್ಸ್ ಓಪನ್ ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ.

ನೀಮಾ ಸಂಘಟನೆಯವರು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಉದ್ಯೋಗಿಗಳು, ನೋಂದಾಯಿತ ಆರೋಗ್ಯ ಸೇವೆ ಒದಗಿಸುವವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ೯೮೮೦೯೦೦೯೨೭, ೮೭೬೨೯೬೧೭೫೭ ಸಂಖ್ಯೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.