ಮಡಿಕೇರಿ, ಅ. ೧೩: ಕುಶಾಲನಗರ ಹಾಗೂ ಮಡಿಕೇರಿಯಲ್ಲಿರುವ ನಾಟ್ಯಾನಿಕೇತನ ಸಂಗೀತ ಹಾಗೂ ನೃತ್ಯ ಶಾಲೆಯ ವತಿಯಿಂದ ಇದೇ ತಿಂಗಳ ತಾ. ೧೬ ರಂದು ಬೆಳಗ್ಗೆ ೯ ಗಂಟೆಗೆ ಮಡಿಕೇರಿ ಓಂಕಾರೇಶ್ವರ ದೇವಾಲಯದ ಬಳಿಯ ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಗೆಜ್ಜೆ ಪೂಜೆ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ ೯ ಗಂಟೆಯಿAದ ವಿವಿಧ ಪೂಜೆಗಳು ನಡೆಯಲಿವೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಹಾಗೂ ಶಕ್ತಿ ದಿನಪತ್ರಿಕೆಯ ವ್ಯವಸ್ಥಾಪಕಿ ಪ್ರಜ್ಞಾ ರಾಜೇಂದ್ರ, ಸಂಗೀತ ನೃತ್ಯ ಶಾಲೆಯ ವ್ಯವಸ್ಥಾಪಕ ವಿನಯ್ ಪಾಲ್ಗೊಳ್ಳಲಿದ್ದಾರೆ ಎಂದು ಸಂಗೀತ ನೃತ್ಯ ಶಾಲೆಯ ಗುರುಗಳಾದ ವಿದೂಷಿ ಪೂರ್ಣಿಮಾ ವಿನಯ್ ತಿಳಿಸಿದ್ದಾರೆ.