ಕಣಿವೆ, ಅ. ೧೩: ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಬಸವನಹಳ್ಳಿ - ಆನೆಕಾಡು ಬಳಿ ಯಾವಾಗಲೂ ವಾಹನಗಳ ಚಾಲಕರನ್ನು ಕಾಡುವ ಬೀಡಾಡಿ ದನಗಳ ಹಾವಳಿ ಇದೀಗ ಮುಂದು ವರೆದು ಕುಶಾಲನಗರ ಪಟ್ಟಣಕ್ಕೂ ವ್ಯಾಪಿಸಿದಂತಿದೆ.

ಕುಶಾಲನಗರ ಪಟ್ಟಣದ ಮುಖ್ಯ ರಸ್ತೆ, ಬೈಪಾಸ್ ರಸ್ತೆ ಹಾಗೂ ಕೂಡಿಗೆ ರಸ್ತೆಯ ಹೆದ್ದಾರಿಗಳಲ್ಲಿ ಸಂಚರಿಸುವ ಹಾಗೂ ರಸ್ತೆಯ ಮಧ್ಯೆಯೇ ಮಲಗುವ ಮೂಲಕ ವಾಹನಗಳ ಸವಾರರು ಹಾಗೂ ಚಾಲಕರಿಗೆ ನಿತ್ಯವೂ ಕಿರಿಕಿರಿ ಉಂಟುಮಾಡುತ್ತಿವೆ.

ಆದ್ದರಿAದ ಸ್ಥಳೀಯ ಕುಶಾಲನಗರ ಪ.ಪಂ. ಆಡಳಿತ ಬೀಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೀಡಾಡಿ ದನಗಳ ಹಾವಳಿ ಯಿಂದಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಯಾಗಿ ಸಾಗುವ ಜಾನುವಾರುಗಳಿಗೆ ಕೆಲವು ವಾಹನಗಳ ಚಾಲಕರ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಡಿಕ್ಕಿಯಾಗಿ ದನಗಳಿಗೆ ಗಾಯಗಳಾ ಗುವ ಅಥವಾ ವಾಹನಗಳಲ್ಲಿ ಸಾಗುವ ಜನಗಳಿಗೂ ಘಾಸಿಗಳಾಗುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಈ ದನಗಳ ಪಾಲಕರು ಹೆದ್ದಾರಿಗೆ ದನಗಳನ್ನು ಬಿಡದಂತೆ ಜಾಗೃತೆ ವಹಿಸುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ದಿಟ್ಟ ಕ್ರಮ ಕೈಗೊಳ್ಳಬೇಕಿದೆ ಎಂದು ಕುಶಾಲನಗರದ ಹಿರಿಯ ನಾಗರಿಕ ಬಿ.ಆರ್. ನಾರಾಯಣ ಒತ್ತಾಯಿಸಿದ್ದಾರೆ.