ಸುಂಟಿಕೊಪ್ಪ, ಅ. ೧೩: ಮಲಯಾಳಿ ಸಮಾಜದ ವತಿಯಿಂದ ೧೫ನೇ ವರ್ಷದ ಓಣಂ ಆಚರಣೆಯ ಅಂಗವಾಗಿ ಇಲ್ಲಿ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಮಹಿಳೆಯರಿಗೆ ಮಕ್ಕಳಿಗೆ ಪುರುಷರಿಗೆ ಹಗ್ಗಜಗ್ಗಾಟ, ಪಾಸಿಂಗ್‌ದ ಬಾಲ್, ಮ್ಯೂಸಿಕಲ್ ಚೇರ್, ಒಂದನೇ ತರಗತಿಯಿಂದ ಪಿಯುಸಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾಜದ ಹೆಚ್ಚಿನ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜೇತರಾದವರಿಗೆ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ್ಪದಲ್ಲಿ ತಾ. ೧೭ ರಂದು ನಡೆಯುವ ಓಣಂ ಆಚರಣೆಯ ವೇದಿಕೆಯಲ್ಲಿ ಬಹುಮಾನಗಳನ್ನು ವಿತರಿಸಲಿದ್ದು, ಅದೇ ದಿನ ಹೂವುಗಳಿಂದ ರಂಗೋಲಿ ಸ್ಪರ್ಧೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಮಧ್ಯಾಹ್ನ ೧೨.೩೦ ರಿಂದ ಓಣಂ ಸದ್ಯ (ಭೋಜನ) ಸಂಜೆ ೩ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ವಿ.ಎ. ಸಂತೋಷ್ ಕುಮಾರ್ ತಿಳಿಸಿದರು. ಈ ಸಂದರ್ಭ ಸಮಾಜದ ಸದಸ್ಯರು ಹಾಜರಿದ್ದರು.