ಸುಂಟಿಕೊಪ್ಪ, ಅ. ೧೩: ಕಳೆದ ಒಂದು ವರ್ಷದಿಂದ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿರುವ ತಾಯಿ. ತಾಯಿಗಾಗಿ ತನ್ನ ಶಾಲಾ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ತಾಯಿಯ ಆರೋಗ್ಯಕ್ಕಾಗಿ ದುಡಿಯುತ್ತಿರುವ ಮಕ್ಕಳು ಸುಂಟಿಕೊಪ್ಪ ಸಮೀಪದ ಕೊಡಗ ರಹಳ್ಳಿ ಪಂಚಾಯಿತಿಯ ಮಾರುತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಗೀತಾ ಎಂಬ ಕಾರ್ಮಿಕ ಮಹಿಳೆಯ ಚಿಂತಾಜನಕ ಕಥೆಯಿದು.
ಗಂಡನನ್ನು ಕಳೆದುಕೊಂಡು ಎರಡು ಗಂಡು ಒಂದು ಹೆಣ್ಣು ಮಕ್ಕಳ ಜೊತೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೀತಾ ತೋಟದಲ್ಲಿ ಕೆÀಲಸ ಮಾಡುವ ಸಂದರ್ಭ ತನ್ನ ಕಾಲಿಗೆ ಗಾಯವಾಗಿತ್ತು. ಎಷ್ಟೇ ಮದ್ದು ಮಾಡಿದರೂ ಫಲಕಾರಿಯಾಗದೆ ಅದು ಉಲ್ಬಣಗೊಂಡು ಗ್ಯಾಂಗ್ರೀನ್ ಆಗಿ ಪರಿವರ್ತನೆಗೊಂಡಿದೆ. ಇದೀಗ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆ ಮೂಲಕ ಎಡಕಾಲಿನ ಪಾದವನ್ನು ಕತ್ತರಿಸಲಾಗಿದೆ. ತೋಟದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾ ಮಕ್ಕಳನ್ನು ಓದಿಸುವ ಹಂಬಲ ಗೀತಳಿಗಿತ್ತು.
ಆದರೆ ಇದೀಗ ಒಂದು ಕಾಲಿನ ಪಾದ ಕಳೆದುಕೊಂಡು ಆಸ್ಪತ್ರೆಯಲ್ಲಿ ದಿನ ದೂಡುವಂತಾಗಿ ಎರಡು ಗಂಡು ಮಕ್ಕಳು ಕೂಲಿ ಕೆಲಸ ಮಾಡುತ್ತಿದ್ದು, ಮಗಳು ಓದುವುದನ್ನು ನಿಲ್ಲಿಸಿ ತಾಯಿಯ ಆರೈಕೆಯಲ್ಲಿ ತೊಡಗಿದ್ದಾಳೆ. ಇದರಿಂದ ವಿದ್ಯಾಭ್ಯಾಸದ ಕನಸು ನುಚ್ಚುನೂರಾಗಿದೆ ಎಂದು ಗೀತಾಳ ಮಗಳು ದೀಪಿಕಾ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ತಾಯಿಯ ಹೆಚ್ಚಿನ ಚಿಕಿತ್ಸೆಗಾಗಿ ಹಣದ ಅವಶ್ಯವಿದ್ದು ದಾನಿಗಳು ನೆರವಾಗುವಂತೆ ಪತ್ರಿಕೆಯ ಮೂಲಕ ಮನವಿ ಮಾಡಿದ್ದಾಳೆ.
ದೀಪಿಕಾ ಬಿ.ಪಿ. ಖಾತೆ ಸಂಖ್ಯೆ-೩೪೧೧೨೬೮೬೨೧ ISಈಅ ಕೋಡ್ ಅಃIಓ ೦೦೨೮೧೯೮೫, ಶಾಖೆ - ಕೊಡಗರಹಳ್ಳಿ. ಗೂಗಲ್ಪೇ-ಫೋನ್ಪೇ ಸಂಖ್ಯೆ ೮೭೯೨೮೩೪೦೩೭. ದೂರವಾಣಿ ಸಂಖ್ಯೆ-+೯೧ ೭೭೬೦೮೩೦೦೭೭