ವೀರಾಜಪೇಟೆ, ಅ. ೧೩: ಅಂತರ್ ಕಾಲೇಜು ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಭಾಗವಹಿಸಿ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪಂದ್ಯಾಟವು ಪೊನ್ನಂಪೇಟೆ ಟರ್ಫ್ ಕ್ರೀಡಾಂಗಣದಲ್ಲಿ ನಡೆಯಿತು.
ಕಾವೇರಿ ಕಾಲೇಜು ವೀರಾಜಪೇಟೆ ತಂಡವು ವೀರಾಜಪೇಟೆ ತಾಲೂಕನ್ನು ಪ್ರತಿನಿಧಿಸಿತ್ತು. ಮೊದಲ ಪಂದ್ಯಾಟ ಮಡಿಕೇರಿ ತಾಲೂಕು ಮತ್ತು ವೀರಾಜಪೇಟೆ ತಾಲೂಕು ತಂಡಗಳ ಮಧ್ಯೆ ನಡೆದು ೭-೦ ಗೋಲುಗಳಿಂದ ಮಡಿಕೇರಿ ತಾಲೂಕು ತಂಡವನ್ನು ಮಣಿಸಿ ಫೈನಲ್ಗೆ ಆರ್ಹತೆ ಪಡೆಯಿತು. ಅಂತಿಮ ಪಂದ್ಯಾಟವು ವೀರಾಜಪೇಟೆ ತಾಲೂಕು ಮತ್ತು ಸೋಮವಾರಪೇಟೆ ತಾಲೂಕು ತಂಡಗಳ ಮಧ್ಯೆ ನಡೆದು ಸೋಮವಾರಪೇಟೆ ತಂಡವನ್ನು ೩-೨ ಗೋಲುಗಳಿಂದ ಮಣಿಸಿ ಜಿಲ್ಲಾಮಟ್ಟದ ಹಾಕಿ ಪಂದ್ಯಾಟದಲ್ಲಿ ಗೆಲುವು ಸಾಧಿಸಿತು.
ಮುಂದಿನ ತಿಂಗಳು ಕಲುಬುರ್ಗಿಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟದಲ್ಲಿ ಕಾವೇರಿ ಕಾಲೇಜಿನ ೬ ಮಂದಿ ಕ್ರೀಡಾಪಟುಗಳು ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಾವೇರಿ ಕಾಲೇಜು ವೀರಾಜಪೇಟೆ ತಂಡದ ಕೆ.ಎಸ್. ತಮ್ಮಯ್ಯ ಅವರು ತರಬೇತಿದಾರರಾಗಿ ಕಾರ್ಯನಿರ್ವಹಿಸಿದರು.