ಮುಳ್ಳೂರು, ಅ. ೧೩: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ವಲಯದ ಪದಾಧಿ ಕಾರಿಗಳ ತರಬೇತಿ ಕಾರ್ಯಾಗಾರ ವನ್ನು ಸಮೀಪದ ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ಮೂಲಕ ಇಂದು ಸಂಘದ ಮಹಿಳಾ ಸದಸ್ಯರು ಆರ್ಥಿಕವಾಗಿ ಸಬಲ ರಾಗುತ್ತಿರುವ ಜೊತೆಯಲ್ಲಿ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಸಂಘದಲ್ಲಿ ತೊಡಗಿಸಿಕೊಳ್ಳುವುದರಿಂದ ಸದಸ್ಯೆ ಯರಲ್ಲಿ ನಾಯಕತ್ವದ ಜವಾಬ್ದಾರಿ, ಮಾನವೀಯ ಮೌಲ್ಯ, ವ್ಯಕ್ತಿತ್ವ ವಿಕಸನ, ಸಮಾಜ ಸೇವೆ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ತಿಳಿದು ಕೊಂಡಿದ್ದನ್ನು ಸಂಘದ ಸದಸ್ಯರಿಗೆ ಹೇಳಿಕೊಡುವಂತೆ ಸಲಹೆ ನೀಡಿದರು.
ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ರೋಹಿತ್ ಮಾತನಾಡಿ, ವಲಯ ಮಟ್ಟದ ಪದಾಧಿಕಾರಿಗಳು ಮತ್ತಷ್ಟು ಸಂಘವನ್ನು ರಚಿಸಲು ಪ್ರಯತ್ನಿಸ ಬೇಕು, ಸಂಘವನ್ನು ಒಗ್ಗಟ್ಟಿನಿಂದ ಮತ್ತು ಪಾರದರ್ಶಕತೆಯಿಂದ ಅಭಿವೃದ್ಧಿ ಪಡಿಸಬೇಕಾಗಿದೆ. ಪ್ರತಿಯೊಂದು ಸಂಘವು ಗ್ರಾಮಾಭಿವೃದ್ಧಿ ಯೋಜನೆಯ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ, ಪ್ರತಿ ಸಂಘಗಳಲ್ಲಿ ವಾರದ ಸಭೆಯನ್ನು ನಡೆಸಿದರೆ ಈ ಮೂಲಕ ಸಂಘವು ಪ್ರಗತಿ ಸಾಧಿಸುತ್ತದೆ ಎಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಒಕ್ಕೂಟದ ಅಧ್ಯಕ್ಷೆ ಎಸ್.ಪಿ. ಭಾಗ್ಯ, ವಲಯ ಮೇಲ್ವಿಚಾರಕ ನಾಗರಾಜ್, ಸೇವಾ ನಿರತೆ ಎಸ್.ಆರ್. ಶೋಭಾವತಿ, ಒಕ್ಕೂಟದ ಕಾರ್ಯದರ್ಶಿ ಎಸ್.ಪಿ. ದಿವ್ಯ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ೯ ವಲಯಗಳಲ್ಲಿದ್ದು ಈ ಪೈಕಿ ಸುಳುಗಳಲೆ ‘ಬಿ’ ಒಕ್ಕೂಟವನ್ನು ಉತ್ತಮ ಒಕ್ಕೂಟ ಎಂದು ಆಯ್ಕೆ ಮಾಡಲಾಯಿತು.