ವಿವಿಧ ಸಂಘಟನೆಗಳಿAದ ಖಂಡನೆ

ಅಖಿಲ ಅಮ್ಮ ಕೊಡವ ಸಮಾಜ ಅಸಮಾಧಾನ

ತಲಕಾವೇರಿ ಜಾತ್ರೆಯ ಕುರಿತು ತಾ. ೧೧ ರಂದು ಭಾಗಮಂಡಲದಲ್ಲಿ ನಡೆದ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಅಧಿಕಾರಿಗಳ ಕ್ರಮ ಸರಿಯಲ್ಲ. ಇದು ಭಕ್ತರ ಜಾತ್ರೆ ಹೊರತು ಅಧಿಕಾರಿಗಳ ಜಾತ್ರೆ ಅಲ್ಲ. ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ ಎಂದು ಅಖಿಲ ಅಮ್ಮ ಕೊಡವ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು, ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದು ಮೂಲ ತಕ್ಕರಾಗಿದ್ದ ಮಂಡೀರ, ಮಣವಟ್ಟೀರ ಹಾಗೂ ಪಟ್ಟಮಾಡ ಕುಟುಂಬದೊAದಿಗೆ ಅಮ್ಮ ಕೊಡವ ಜನಾಂಗ ಸೇರಿದಂತೆ ಕೇವಲ ನಾಲ್ಕು ಜನರಿಗೆ ಕುಂಡಿಕೆಯ ಸಮೀಪ ನಿಲ್ಲಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದರಲ್ಲಿ ತಪ್ಪಿಲ್ಲ. ವಿಐಪಿ, ವಿವಿಐಪಿಗಳೆಂದು ರಾಜಕಾರಣಿಗಳು, ಅಧಿಕಾರಿಗಳು ಮಾತ್ರ ಅಲ್ಲ, ಅವರ ಸಂಸಾರದವರಿಗೂ ಮತ್ತು ನೆಂಟರಿಗೂ ಇಲ್ಲಿ ನಿಲ್ಲಲು ಅವಕಾಶ ಮಾಡಿಕೊಡುವಾಗ, ಇಲ್ಲಿನ ಮೂಲ ತಕ್ಕ ಮುಖ್ಯಸ್ಥರು ಹಾಗೂ ಮೂಲ ಅರ್ಚಕ ಕುಟುಂಬವಾದ ನಮಗೆ ನಿಲ್ಲಲು ಅವಕಾಶ ಮಾಡಿಕೊಡಿ ಎಂಬ ಚರ್ಚೆ ನಡೆಯುತ್ತಿದ್ದಾಗ ಇದಕ್ಕೆ ಸರಿಯಾದ ಉತ್ತರ ನೀಡಲು ಸಾಧ್ಯವಾಗದೆ ಪಲಾಯನ ಮಾಡಿದ ಅಧಿಕಾರಿಗಳ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮ ಖಂಡನೀಯ ಎಂದಿದ್ದಾರೆ.

ಕೊಡವಾಮೆರ ಕೊಂಡಾಟದಿAದ ಜಿಲ್ಲಾಧಿಕಾರಿಗೆ ದೂರು

ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ನಡೆದ ಪೂರ್ವಭಾವಿ ಸಭೆಗೆ ಕೊಡವ ಸಮಾಜ ಹಾಗೂ ಕೊಡವ ನಾಯಕರನ್ನು ಆಹ್ವಾನಿಸಿರಲಿಲ್ಲ. ಆದರೂ ಸುಸೂತ್ರ ಉತ್ಸವ ಆಚರಣೆಯ ಉದ್ಧೇಶದಿಂದ ಸಭೆಯಲ್ಲಿ ಭಾಗವಹಿಸಿದ ಕೊಡವ ನಾಯಕರು ತಮ್ಮ ಅಭಿಪ್ರಾಯ-ಸಲಹೆಗಳನ್ನು ನೀಡಲು ಮುಂದಾದಾಗ, ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿಯೇ ನೀಡದೆ ಸಭೆಯನ್ನು ಅರ್ದಕ್ಕೆ ನಿಲ್ಲಿಸಿ ಹೊರನಡೆದಿದ್ದು ಖಂಡನೀಯ. ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಅಪರ ಜಿಲ್ಲಾಧಿಕಾರಿಗಳಿಗೆ ಸಭೆಯನ್ನು ಮೊಟಕುಗೊಳಿಸಲು ಕೈಸನ್ನೆಯ ಮೂಲಕ ನಿರ್ದೇಶನ ನೀಡಿದಕ್ಕೆ ಪ್ರತ್ಯಕ್ಷ ಸಾಕ್ಷಿಗಳಿವೆ. ಹಾಗಾಗಿ ಈ ಕುರಿತು ಸೂಕ್ತ ತನಿಖೆ ನಡೆಸಿ ಜಿಲ್ಲೆಯ ಜನತೆಗೆ ನೈಜಾಂಶವನ್ನು ಬಹಿರಂಗ ಪಡಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಬರೆದಿರುವ ಪತ್ರದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆ ಒತ್ತಾಯಿಸಿದೆ.

ಅಖಿಲ ಕೊಡವ ಸಮಾಜ ಯೂತ್ ವಿಂಗ್ ಖಂಡನೆ

ತಲಕಾವೇರಿ ತೀರ್ಥೋದ್ಭವದ ಕುರಿತ ಭಾಗಮಂಡಲದಲ್ಲಿ ನಡೆದ ಸಭೆಯಲ್ಲಿ ಉತ್ತರ ನೀಡಲಾಗದೆ ಸಭೆಯಿಂದ ತೆರಳಿದ ಅಧಿಕಾರಿಗಳ ಹಾಗೂ ಸ್ಥಳೀಯ ಪಂಚಾಯಿತಿ ವರ್ತನೆಯನ್ನು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಖಂಡಿಸಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಭೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದರಲ್ಲದೆ, ಇಲ್ಲಿನ ಮೂಲ ತಕ್ಕರು ಎಂದು ಹೇಳಲಾಗುವ ಮಂಡೀರ, ಮಣವಟ್ಟೀರ ಹಾಗೂ ಪಟ್ಟಮಾಡ ಕುಟುಂಬದೊAದಿಗೆ ಮೂಲ ಅರ್ಚಕ ಕುಟುಂಬ ಎಂದು ಹೇಳಲಾಗುವ ಅಮ್ಮ ಕೊಡವರು ಸೇರಿದಂತೆ ತಲಾ ಒಬ್ಬೊಬ್ಬರಿಗೆ ಅಂದರೆ ಒಟ್ಟು ನಾಲ್ಕು ಜನರಿಗೆ ತೀರ್ಥೋದ್ಭ್ಬವ ಸಂದರ್ಭದಲ್ಲಿ ಕುಂಡಿಕೆಯ ಹತ್ತಿರ ಸ್ಥಳಾವಕಾಶ ನೀಡಬೇಕು ಎಂಬ ಕೂಗು ಸಭೆಯಲ್ಲಿ ಅಧಿಕವಾಗುತ್ತಿದ್ದಂತೆ ಇದಕ್ಕೆ ಸರಿಯಾದ ಉತ್ತರ ನೀಡಲಾಗದೆ ಅಧಿಕಾರಿಗಳು ತೆರಳಿದ ಕ್ರಮ ಸರಿಯಲ್ಲ, ತೀರ್ಥೋದ್ಬವದಂದು ಈ ಕುಟುಂಬದ ತಲಾ ಒಬ್ಬರಂತೆ ನಾಲ್ಕು ಜನರಿಗೆ ಕುಂಡಿಕೆಯ ಸಮೀಪ ನಿಲ್ಲಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ತನಿಖೆಗೆ ಕನೆಕ್ಟಿಂಗ್ ಕೊಡವಾಸ್ ಆಗ್ರಹ

ಭಾಗಮಂಡಲದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರ ಅಧ್ಯಕ್ಷತೆಯಲ್ಲಿ ತಲಕಾವೇರಿಯ ತೀರ್ಥೋದ್ಭವದ ಪೂರ್ವಭಾವಿ ಸಭೆಯಲ್ಲಿ ಕೊಡವ ಜನಾಂಗದ ಕೇವಲ ೪-೫ ಜನರಿಗೆ ಮಾತ್ರ ಆಹ್ವಾನ ನೀಡಿ ಜನಾಂಗವನ್ನು ಕಡೆಗಣಿಸಲಾಗಿದೆ. ಭಾಗಮಂಡಲದ ಆಸುಪಾಸಿನ ಕೆಲವು ಸಂಘ ಸಂಸ್ಥೆಗಳಿಗೆ ಮತ್ತು ಯಾವುದೇ ಪ್ರಾಮುಖ್ಯತೆ ಇಲ್ಲದವರಿಗೆ ಆಹ್ವಾನ ನೀಡಲಾಗಿತ್ತು. ಕಾವೇರಿ ತೀರ್ಥೋದ್ಭವ ಕೊಡವರ ಪ್ರಮುಖ ಆಚರಣೆಯಾಗಿದ್ದರೂ ಕೊಡವರನ್ನು ಮೂಲೆಗುಂಪು ಮಾಡಿ ಅದು ಭಾಗಮಂಡಲದ ಜನತೆಗೆ ಮಾತ್ರ ಅನ್ವಯ ಎಂಬAತೆ ಬಿಂಬಿಸುವ ಹುನ್ನಾರ ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ಕನೆಕ್ಟಿಂಗ್ ಕೊಡವಾಸ್ ಆರೋಪಿಸಿದೆ.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಅಪರ ಜಿಲ್ಲಾಧಿಕಾರಿಗೆ ಕೈಸನ್ನೆ ಮಾಡಿದ ತಕ್ಷಣ ಸಭೆಯೇ ನಿಂತುಹೋಯಿತೆAದರೆ ಇದರಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ಖಾತ್ರಿಯಾಗುತ್ತದೆ.

ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ತೀರ್ಮಾನ ಕೈಗೊಳ್ಳಬೇಕಾದ ಇವರು ಉತ್ತರ ನೀಡಲು ಸಮರ್ಥರಾಗಿರದೆ, ಸಭೆಯನ್ನು ಸ್ಥಗಿತಗೊಳಿಸಿರುವುದು ಖಂಡನೀಯ. ಈ ವಿಷಯದಲ್ಲಿ ಅನವಶ್ಯಕ ಗೊಂದಲವನ್ನುAಟು ಮಾಡಿದ, ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರುಗಳ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯನ್ನು ಕೈಗೊಂಡು ಶಿಸ್ತು ಕ್ರಮವನ್ನು ಜರುಗಿಸುವಂತೆ ಸಂಘಟನೆ ಆಗ್ರಹಿಸಿದೆ.

ಬೆಂಗಳೂರು ಕೊಡವ ಸಮಾಜ ಖಂಡನೆ

ತೀರ್ಥೋದ್ಭವ ಸಂದರ್ಭ ಈ ಹಿಂದಿನಿAದಲೂ ಮಣವಟ್ಟಿರ, ಮಂಡಿರ ಮತ್ತು ಪಟ್ಟಮಾಡ ಕುಟುಂಬ ಹಾಗೂ ಮೂಲ ಅರ್ಚಕರಾದ ಅಮ್ಮಕೊಡವ ಜನಂಗದ ಒಬ್ಬರಿಗೆ ಕುಂಡಿಕೆ ಸಮೀಪದಲ್ಲಿ ನಿಲ್ಲಲು ಅವಕಾಶವಿದೆ. ಈ ಸಂಬAಧ ತಾ. ೧೧ ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಇದೇ ಕುಟುಂಬದವರಿಗೆ ಕುಂಡಿಕೆಯ ಸಮೀಪ ನಿಲ್ಲಲು ಅವಕಾಶ ಮಾಡಿಕೊಡಬೇಕೆಂದು ಕೇಳಿದಾಗ ಅಪರ ಜಿಲ್ಲಾಧಿಕಾರಿಯವರು ಸಭೆಯನ್ನು ಅರ್ಧದಲ್ಲಿ ನಿಲ್ಲಿಸಿ ಹೊರ ನಡೆದಿರುವುದು ಖಂಡನೀಯ ಎಂದು ಬೆಂಗಳೂರು ಕೊಡವ ಸಮಾಜದ ಪ್ರಕಟಣೆ ತಿಳಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಈ ವಿಷಯದ ಕುರಿತು ಬೆಂಗಳೂರು ಕೊಡವ ಸಮಾಜದಿಂದ ದೂರು ನೀಡಲಾಗುವುದೆಂದು ಸಮಾಜದ ಪ್ರಕಟಣೆ ತಿಳಿಸಿದೆ.

ಮೂರ್ನಾಡು ಕೊಡವ ಸಮಾಜ ಖಂಡನೆ

ಕಾವೇರಿ ತೀರ್ಥೋದ್ಭವದ ಹಿನ್ನೆಲೆ ಭಾಗಮಂಡಲದಲ್ಲಿ ನಡೆದ ಸಾರ್ವಜನಿಕ ಪೂರ್ವಭಾವಿ ಸಭೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ನಿರ್ಗಮಿಸಿದ ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರ ಕ್ರಮವನ್ನು ಮೂರ್ನಾಡು ಕೊಡವ ಸಮಾಜ ಖಂಡಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ಹಾಗೂ ಆಡಳಿತ ಮಂಡಳಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳದೆ, ಜಿಲ್ಲೆಯ ಜನಾಂಗ ಬಾಂಧವರೊAದಿಗೆ ಹೊಂದಾಣಿಕೆಯೊAದಿಗೆ, ಕರ್ತವ್ಯ ನಿರ್ವಹಿಸುವಂತಾಗಬೇಕೆAದು ಮನವಿ ಮಾಡಿದ್ದಾರೆ.