ವೀರಾಜಪೇಟೆ, ಅ. ೧೩: ನಗರದಲ್ಲಿ ಕಳೆದ ತಿಂಗಳು ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೋರ್ವ ಪ್ರಮುಖ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡು ಪೈಸಾರಿ ನಿವಾಸಿ ಎ.ಕೆ.ರಮೇಶ್ (೩೯) ಬಂಧಿತ ವ್ಯಕ್ತಿ. ಸೆ.೧೯ ರಂದು ವೀರಾಜಪೇಟೆ ನಗರ ಪೊಲೀಸರು ಒಡಿಸ್ಸಾ ಮೂಲದ ನಗರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ಸೂರ್ಯಕಾಂತ್ ಮೊಹಂತಿ ಎಂಬಾತನಿAದ ಸುಮಾರು ೬ ಕೆ.ಜಿ. ೫೦೦ ಗ್ರಾಂ ಗಾಂಜಾ ವಶ ಪಡಿಸಿಕೊಂಡು ಬಂಧಿಸಿದ್ದರು. ಈತನ ಜೊತೆಗೆ ಕೈಜೋಡಿಸಿ ತಲೆಮರೆಸಿ ಕೊಂಡಿದ್ದ ರಮೇಶ್ ಅನ್ನು ಇದೀಗ ಬಂಧಿಸಲಾಗಿದೆ.

ರಮೇಶ್ ತನ್ನ ಆರ್ಥಿಕ ಸಮಸ್ಯೆ ಯನ್ನು ಹೇಳಿಕೊಂಡ ಸಂದರ್ಭ ಸೂರ್ಯಕಾಂತ್ ಗಾಂಜಾ ಮಾರಾಟ ಮಾಡಲು ದಾರಿ ತೋರಿಸಿದ್ದಾನೆ. ಆನಂತರ ಈರ್ವರು ಸೇರಿ ಓಡಿಸ್ಸಾದಿಂದ ಗಾಂಜಾ ತಂದು ಮಾರಾಟ ಮಾಡಲು ಮುಂದಾಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಸೂರ್ಯಕಾಂತ್ ಬಂಧನÀವಾದ ದಿನದಿಂದ ರಮೇಶ್ ತಲೆಮರಿಸಿ ಕೊಂಡಿದ್ದ ರಾತ್ರಿಯ ವೇಳೆಯಲ್ಲಿ ಸ್ವಗ್ರಾಮ ಪೆಗ್ಗರಿಕಾಡಿಗೆ ಬಂದು ಇಂದು ಬೆಳಿಗ್ಗೆ ಮಗ್ಗುಲ ಗ್ರಾಮದಿಂದ ಸಿದ್ದಾಪುರಕ್ಕೆ ತೆರಳಲು ಬಸ್ ತಂಗುದಾಣದಲ್ಲಿ ಇದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ