ನಾಪೋಕ್ಲು, ಅ. ೧೩: ನಾಪೋಕ್ಲುವಿನ ಪ್ರತಿಷ್ಟಿತ ಶಿವಾಜಿ ಕ್ಲಬ್ ವತಿಯಿಂದ ಅಂರ‍್ರಾಷ್ಟಿçÃಯ ಹಾಕಿ ತೀರ್ಪುಗಾರರಾಗಿದ್ದ ದಿ. ಅನುಪಮ ಪುಚ್ಚಿಮಂಡ ಅವರ ಸ್ಮರಣಾರ್ಥ ಮುಕ್ತ ಹಾಕಿ ಪಂದ್ಯಾವಳಿ ಡಿ. ೧ ರಿಂದ ೫ ರವರೆಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೇಲೇಟಿರ ದೀಪು ದೇವಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಾಜಿ ಕ್ಲಬ್‌ನ ಅಧ್ಯಕ್ಷ ಕೇಲೇಟಿರ ದೀಪು ದೇವಯ್ಯ ಅವರು ಈ ಕುರಿತು ಮಾಹಿತಿ ನೀಡಿ, ಕಳೆದ ಮೇ ತಿಂಗಳಿನಲ್ಲಿ ನಡೆಸಲು ಉದ್ದೇಶಿಸ ಲಾಗಿದ್ದ ಅನುಪಮ ಮೆಮೋರಿ ಯಲ್ ಓಪನ್ ಹಾಕಿ ಟೂರ್ನಿಮೆಂಟ್ ಅನ್ನು ಮಳೆಯ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಡಿ. ೧ ರಿಂದ ೫ ರವರೆಗೆ ಟೂರ್ನಿಮೆಂಟ್ ನಡೆಸಲು ನಿರ್ಧರಿಸಲಾಗಿದೆ ಎಂದರು.

ಪAದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿ ತಂಡದಲ್ಲಿ ಮೂವರು ಅತಿಥಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಕಿ ಕೂರ್ಗ್ನ ನಿಬಂಧನೆ ಮತ್ತು ನಿರ್ಧಾರಗಳಿಗೆ ತಂಡಗಳು ಬದ್ಧವಾಗಿರಬೇಕು.

ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. ೫೦ ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೩೦ ಸಾವಿರ ನಗದು ಬಹುಮಾನ ನೀಡಲಾಗುವುದೆಂದು ತಿಳಿಸಿದರು. ಈಗಾಗಲೇ ೨೫ ತಂಡಗಳು ಹೆಸರು ನೋಂದಾವಣೆ ಮಾಡಿದ್ದು, ಯಾವುದಾದರೂ ತಂಡ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಇಚ್ಚಿಸಿದ್ದಲ್ಲಿ ನ. ೧೫ ರೊಳಗೆ ಹೆಸರು ನೋಂದಾವಣೆ ಮಾಡಿಕೊಳ್ಳ ಬಹುದಾಗಿದೆ. ಹೆಸರು ನೋಂದಾ ಯಿಸಲು ಕೇಲೇಟಿರ ದೀಪು ದೇವಯ್ಯ ಮೊಬೈಲ್ ನಂಬರ್. ೯೬೮೬೮೬೯೨೧೩., ಬೋಟ್ಟೋಳಂಡ ಚೇತು- ೯೪೮೨೭೦೮೪೩೪., ನಾಯಕಂಡ ದೀಪು-೯೪೪೮೬೪೭೩೫೭. ಈ ಸಂಖ್ಯೆಯನ್ನು ಸಂಪರ್ಕಿಸ ಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಪದಾಧಿಕಾರಿಗಳಾದ ಕಾಳಪ್ಪ ಕೇಲೇಟಿರ, ಸೋಮಣ್ಣ ಅರೆಯಡ, ಕವಿನ್ ಬಿದ್ದಾಟಂಡ, ಗಣಪತಿ ಕೊಂಡಿರ ಉಪಸ್ಥಿತರಿದ್ದರು.