ಮೈಸೂರು, ಅ. ೧೨: ಮೈಸೂರಿನ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಮೈಸೂರು ವಲಯ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಿಗ್ನೇಚರ್ ಡ್ಯಾನ್ಸ್ ಕಂಪೆನಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಹದಿನೈದಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಶಾಸ್ತಿçÃಯ, ಜಾನಪದ, ಪಾಶ್ಚತ್ಯ ಹಾಗೂ ಬ್ಯಾಟಲ್ ವಿಭಾಗಗಳಲ್ಲಿ ವಿವಿಧ ವಯೋಮಿತಿಯ ಸ್ಪರ್ಧೆಗಳು ನಡೆದವು. ೧೨ ಚಿನ್ನದ ಪದಕ ಗಳಿಸಿದ ಜಿಲ್ಲೆಯ ನೃತ್ಯ ನಿರ್ದೇಶಕ ವಿನೋದ್ ಕರ್ಕೇರ ನೇತೃತ್ವದ ಮೈಸೂರಿನ ಸಿಗ್ನೇಚರ್ ಡಾನ್ಸ್ ಕಂಪನಿ ಸಮಗ್ರ ಚಾಂಪಿಯನ್‌ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಹುಣಸೂರಿನ ಡ್ರೀಮ್ಸ್ ಡ್ಯಾನ್ಸ್ ಅಕಾಡೆಮಿ ದ್ವಿತೀಯ ಸ್ಥಾನ ಹಾಗೂ ಕಾವೇರಿ ಎಕ್ಟೆçಸ್ ತಂಡ ತೃತೀಯ ಸ್ಥಾನ ಪಡೆದವು.

ವೇದಿಕೆಯಲ್ಲಿ ಬೆಂಗಳೂರಿನ ಉನ್ನತಿ ಗುರುಕುಲ ಸಂಸ್ಥೆಯ ಸಂಸ್ಥಾಪಕ ಎನ್. ಭಾಸ್ಕರ್, ಕ್ರೆಡಿಟ್ ಐ ಸಂಸ್ಥೆಯ ಡಾ. ಎಂ.ಪಿ. ವರ್ಷ, ಇಂಟರ್ನ್ಯಾಷನಲ್ ಯೂತ್ ಹಾಸ್ಟೆಲ್ ರಾಜ್ಯ ಉಪಾಧ್ಯಕ್ಷ ರವಿಕುಮಾರ್ ಹೆಚ್, ಕರ್ನಾಟಕ ಸ್ಪೋರ್ಟ್ ಡ್ಯಾನ್ಸ್ ಸಂಸ್ಥೆಯ ರಾಜ್ಯಾಧ್ಯಕ್ಷ ರವಿ ಸಿ, ನಿರ್ದೇಶಕ ನಿತೇಶ್ ಭಂಡಾರಿ ಉಪಸ್ಥಿತರಿದ್ದರು. ಮೇಘಾ ಕೃಷ್ಣ ಪ್ರಾರ್ಥಿಸಿದರು, ವಿನೋದ್ ಕರ್ಕೇರ ನಿರೂಪಿಸಿದರು.

ತೀರ್ಪುಗಾರರಾಗಿ ಬಿ.ಸಿ. ಶಂಕರಯ್ಯ, ಯುಎಸ್‌ಎ ಆದರ್ಶ್, ಆದರ್ಶ್ ರಾವ್, ಶಶಾಂತ್ ಇಂದ್ರಜಿತ್, ರಕ್ಷಿತ್ ಗೌಡ ಹಾಗೂ ಪ್ರದೀಪ್ ಕಾರ್ಯನಿರ್ವಹಿಸಿದರು.