ಪೊನ್ನAಪೇಟೆ, ಅ. ೧೩: ತ್ಯಾಗ ಮತ್ತು ಸೇವೆ ಪ್ರಧಾನವಾಗಿದ್ದಾಗ ಮಾತ್ರ ಸಾಮಾಜಿಕ ಸೇವಾ ಸಂಸ್ಥೆಗಳು ತಲೆ ಮಾರಿನಿಂದ ತಲೆಮಾರಿಗೆ ಮುಂದು ವರೆಯುತ್ತವೆ ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾ. ೧೨ ರಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಆಯೋಜಿಸಲಾಗಿದ್ದ ಆಧ್ಯಾತ್ಮಿಕ ಶಿಬಿರದ ಉದ್ಘಾಟನೆ ಮತ್ತು ‘ಖಿhe ಆesಛಿeಟಿಣ oಜಿ ಣhe ಆiviಟಿe iಟಿ ಣhe ಐಚಿಟಿಜ oಜಿ ಏಚಿveಡಿi ಊisಣoಡಿಥಿ oಜಿ Sಡಿi ಖಚಿmಚಿಞಡಿishಟಿಚಿ Shಚಿಡಿಚಿಜಚಿshಡಿಚಿmಚಿ Poಟಿಟಿಚಿmಠಿeಣ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ಸಾಮಾಜಿಕ ಸೇವೆಗೆಂದು ಹಲವಾರು ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಅವೆಲ್ಲ ಕೆಲ ಸಮಯದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ತಲೆಮಾರಿನಿಂದ ತಲೆಮಾರಿಗೆ ಮುನ್ನಡೆಸುವವರು ಸ್ವಾರ್ಥ, ಭೋಗ, ಸೋಮಾರಿತನ, ಪ್ರತಿಷ್ಠೆಗಳಿಗೆ ಒಳಗಾಗಿ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸ್ಥಾಪಿಸಿದ ಸಂಸ್ಥೆಗಳ ನಾಶಕ್ಕೆ ಕಾರಣರಾಗುತ್ತಾರೆ. ಯಾವ ಸಂಸ್ಥೆಗಳು ನಿಸ್ವಾರ್ಥ ಮನೋಭಾವವನ್ನು ಹೊಂದಿರುತ್ತವೋ ಅಂತಹ ಸಂಸ್ಥೆಗಳು ಮಾತ್ರ ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯುತ್ತವೆ. ಇಂದಿನ ದೇವಾಲಯಗಳು ತ್ಯಾಗ, ಸೇವಾ ಕೇಂದ್ರಗಳಾಗಬೇಕು ಎಂದರು.
ಈ ಪುಸ್ತಕ ಆಶ್ರಮದ ೯೫ ವರ್ಷಗಳ ಆಗು ಹೋಗುಗಳನ್ನು ಜನಮನಕ್ಕೆ ತಿಳಿಸುವ ಇತಿಹಾಸದ ಮೂಲಾಧಾರವಾದ ಗ್ರಂಥವಾಗಿದೆ ಎಂದು ಅಭಿಪ್ರಾಯ ಪಟ್ಟರು. ತುಮಕೂರು ಜಿಲ್ಲೆಯ ಮಾದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷ ಬೋದ ಸ್ವರೂಪಾನಂದಜೀ ಮಹಾರಾಜ್ ರವರು ಪುಸ್ತಕದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿ ಇಲ್ಲಿಯವರೆಗೆ ಆಶ್ರಮ ವನ್ನು ಮುನ್ನಡೆಸಿದ ಸ್ವಾಮೀಜಿಗಳ ಪರಿಚಯವನ್ನು ಮಾಡಿಕೊಡಲಾಗಿದೆ ಎಂದರು.
ಪುಸ್ತಕದ ಲೇಖಕ ಕೀರ್ತಿಕುಮಾರ್ ಅವರನ್ನು ಆಶ್ರಮದಿಂದ ಸನ್ಮಾನಿಸಲಾ ಯಿತು. ಪುಸ್ತಕ ಮುದ್ರಣ ಮಾಡಿದ ಮಯೂರ್ ಗ್ರಾಫಿಕ್ಸ್ನ ಪಾರ್ಥಸಾರಥಿ, ಸುನಿಲ್, ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೊ. ಅನಂತರಾಮ್, ಆಶ್ರಮದ ಯತಿಗಳು, ಬ್ರಹ್ಮಚಾರಿಗಳು, ಸಲಹಾ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿ ದ್ದರು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ತತ್ವ ರೂಪಾನಂದಜೀ ಮಹಾರಾಜ್ ಸ್ವಾಗತಿಸಿದರು. ಹಾಲೇಶ್ ಜಂಬಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.