ಮಡಿಕೇರಿ, ಅ. ೧೨: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪೊನ್ನಂಪೇಟೆ ಸಂತ ಅಂತೋಣಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಸಂತ ಅಂತೋಣಿ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ವಿಜೇತರಾಗುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಬಾಲಕರ ತಂಡ ದ್ವಿತೀಯ ಬಹುಮಾನ ಪಡೆದು, ತಂಡದ ಪ್ರಥಮ್ ಹಾಗೂ ಚಂಗಪ್ಪ ರಾಜ್ಯಮಟ್ಟದಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಮುಖ್ಯಸ್ಥ ರೆ.ಫಾ. ಡೇವಿಡ್ ಸಗಯರಾಜ್, ತರಬೇತುದಾರರಾದ ಪವನ್ ಎಂ.ಟಿ., ಶಂಭು ಕಾರ್ಯಪ್ಪ, ಪ್ರಾಂಶುಪಾಲೆ ಚಂದ್ರಿಕಾ, ಅಧ್ಯಾಪಕರಾದ ಮಾಚಮ್ಮ, ಪೌಶಿಕ ಹಾಜರಿದ್ದರು.