ಪೆರಾಜೆ, ಅ. ೧೩: ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಪೆರಾಜೆ ವತಿಯಿಂದ ರೈತ ಸಮಾವೇಶ ಮತ್ತು ಅಡಿಕೆ ಹಳದಿ ರೋಗದ ಸ್ವಯಂ ಘೋಷಿತ ಅರ್ಜಿ ವಿತರಣೆ ಹಾಗೂ ಸಂವಾದ ಕಾರ್ಯಕ್ರಮ ಪೆರಾಜೆ ರೈತ ಸಂಘದ ಅಧ್ಯಕ್ಷ ಎನ್.ಪಿ. ಬಾಲಕೃಷ್ಣ ನಿಡ್ಯಮಲೆಯವರ ಅಧ್ಯಕ್ಷತೆಯಲ್ಲಿ ಇಲ್ಲಿನ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಿ.ಪಿ.ಸಿ.ಆರ್.ಐ. ವಿಟ್ಲದ ಅಧಿಕಾರಿಗಳಾದ ಡಾ. ಭವಿಷ್ಯ ಅಡಿಕೆ ಹಳದಿ ಎಲೆ ರೋಗ ಮತ್ತು ಪೋಷಕಾಂಶ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಪೆರಾಜೆ ರೈತ ಸಂಘದ ಗೌರವಾಧ್ಯಕ್ಷ ಹರಿಶ್ಚಂದ್ರ ಮುಡ್ಕಜೆ, ಉದ್ಯಮಿ ರಮೇಶ್ ಶೆಟ್ಟಿ, ಪೆರಾಜೆ ರೈತ ಸಂಘದ ಪದಾಧಿಕಾರಿಗಳಾದ ಪುರುಷೋತ್ತಮ ಬಂಗಾರಕೋಡಿ, ಗೋಪಾಲ್ ಪೆರಾಜೆ ಉಪಸ್ಥಿತರಿದ್ದರು.