ಮಡಿಕೇರಿ, ಅ. ೧೩: ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಮ್ಮಿಯಾಲ ಗ್ರಾಮದ ಹಮ್ಮಿಯಾಲ ಶಾಲಾ ಸಭಾಂಗಣ, ಕುಂದ ದಬೇಚಮ್ಮ ದೇವಸ್ಥಾನ ಸಭಾಂಗಣ, ಕೊಂಡAಗೇರಿ ಶಾದಿಮಹಲ್ ಸಭಾಂಗಣ, ಸಿದ್ಧಲಿಂಗಪುರ ಅಳುವಾರಮ್ಮನ ದೇವಸ್ಥಾನ ಸಭಾಂಗಣ ಮತ್ತು ಮಲ್ಲಹಳ್ಳಿ ಬೀದಳ್ಳಿ ಕುಮಾರಲಿಂಗೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯಾಯ ಸ್ಥಳಗಳಲ್ಲಿ ತಾ. ೧೫ ರಂದು ಬೆಳಗ್ಗೆ ೧೧ ಗಂಟೆಗೆ ವಿದ್ಯುತ್ ಅದಾಲತ್ ನಡೆಯಲಿದೆ.
ಆದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರು/ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳÀನ್ನು ಸಲ್ಲಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ತಿಳಿಸಿದ್ದಾರೆ.