ಸೋಮವಾರಪೇಟೆ, ಅ. ೧೩: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಇರುವ ಉದ್ಯಾನವನಗಳು ನಿರ್ವಹಣೆ ಕೊರತೆಯಿಂದ ಸೊರಗಿದ್ದು, ತಕ್ಷಣ ನಿರ್ವಹಣೆ ಕಾರ್ಯ ಕೈಗೊಂಡು ಉದ್ಯಾನವನದ ಸೌಂದರ್ಯ ಹೆಚ್ಚಿಸಬೇಕೆಂದು ಕರವೇ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷ ಪ್ರಾನ್ಸಿಸ್ ಆಗ್ರಹಿಸಿದ್ದಾರೆ.
ಗೌಡಳ್ಳಿ ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸುಂದರ ಉದ್ಯಾನವನ ನಿರ್ಮಾಣಕ್ಕೆಂದು ಪಂಚಾಯಿತಿಯಿAದ ಅನುದಾನ ಮೀಡಲಿಟ್ಟಿದ್ದು, ಅದರಂತೆ ಕಳೆದ ೬ ತಿಂಗಳ ಹಿಂದೆ ಕಟ್ಟಡ ಕಾಮಗಾರಿ ನಡೆದಿದೆ.
ಈಗಾಗಲೇ ಕಟ್ಟಡಗಳು ಒಡೆದು ಹೋಗುತ್ತಿದ್ದು, ಉದ್ಯಾನವನದಲ್ಲಿ ಯಾವ ಗಿಡಗಳೂ ಇಲ್ಲವಾಗಿದೆ. ಆದರೆ ಪಂಚಾಯಿತಿಯಿAದ ರೂ. ೩.೫೦ ರಿಂದ ೪ ಲಕ್ಷ ಅನುದಾನ ಖರ್ಚು ಮಾಡಲಾಗಿದೆ. ಈವರೆಗೆ ಉದ್ಯಾನವನ ತನ್ನ ಮೂಲ ಸ್ವರೂಪವನ್ನು ಪಡೆದಿಲ್ಲ. ಅನುದಾನ ವ್ಯರ್ಥವಾಗುವ ಮೊದಲು ಗ್ರಾಮ ಪಂಚಾಯಿತಿ ಇತ್ತ ಗಮನಹರಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.