ಮಡಿಕೇರಿ, ಅ. ೧೩: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ಹೊರತರಲಾಗಿರುವ ಅರೆಭಾಷೆ ವಿಶ್ವಕೋಶ ಅರೆಭಾಷೆಯ ಸಂಸ್ಕೃತಿಯನ್ನು ತಿಳಿಸುವ ಗ್ರಂಥವಾಗಿದೆ ಎಂದು ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಹಾ.ತಿ.ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತರಲಾಗಿರುವ ಅರೆಭಾಷೆ ವಿಶ್ವಕೋಶ, ಗ್ರಾಂಥಿಕ ಕನ್ನಡ ಮತ್ತೆ ಅರೆಭಾಷೆ ತೌಲನಿಕ ವ್ಯಾಕರಣ, ಅರೆಭಾಸೆ ಕೈಪಿಡಿ, ನಾಟಕ, ಕತೆ, ಲಲಿತ ಪ್ರಬಂಧ, ಅರೆಭಾಸೆ ಸಾಧಕರ ಮಾಲೆ ಪುಸ್ತಕಗಳನ್ನು ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅರೆಭಾಷೆ ಯಲ್ಲಿ ವಿಶ್ವಕೋಶ ರಚಿಸಿರುವದು ಮಹತ್ವದ ಕಾರ್ಯವಾಗಿದೆ, ಇದೀಗ ೪೫೦ ಪುಟಗಳಿರುವ ವಿಶ್ವಕೋಶ ಮುಂದಿನ ದಿನಗಳಲ್ಲಿ ೧೦೦೦ ಪುಟಗಳಿಗೆ ವಿಸ್ತರಿಸುವ ಕಾರ್ಯವಾಗ ಬೇಕಿದ್ದು, ಇದಕ್ಕೆ ಎಲ್ಲರ ಒತ್ತಾಸೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಯಾರಿಂದಲೂ ಯಾವ ಕೆಲಸವೂ ಪರಿಪೂರ್ಣವಾಗುವದಿಲ್ಲ, ಏನಾದರೊಂದು ಕೊರತೆ ಇರುತ್ತದೆ, ಜ್ಞಾನ ಅಕ್ಷಯವಾದುದು, ಹಣವನ್ನು ಕೂಡಿಡುವಂತೆ ಜ್ಞಾನವನ್ನು ಕೂಡಿಟ್ಟು ಗಳಿಸುತ್ತಾ ಹೋಗಬೇಕು. ಇಂತಹ ಒಂದು ಮಹತ್ಕಾರ್ಯವನ್ನು ಅಕಾಡೆಮಿ ಮಾಡಿ ತೋರಿಸಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸಬೇಕೆAಬ ಆಲೋಚನೆಯಿಂದ ಕಾಲದ ಮಿತಿಯಲ್ಲಿ ಅಕಾಡೆಮಿಯವರು ಉತ್ತಮ ಕೆಲಸ ಮಾಡಿದ್ದಾರೆ. ಯಾವದೇ ಕೆಲಸ ಮಾಡಬೇಕಿದ್ದರೂ ಬದ್ಧತೆಯಿದ್ದರೆ ಮಾತ್ರ ಸಾಧ್ಯವೆಂದು ಹೇಳಿದರು.

ಮಕ್ಕಳಲ್ಲಿ ಅಭಿರುಚಿ ಬೆಳೆಸಬೇಕು

ಮುಖ್ಯ ಅತಿಥಿಯಾಗಿದ್ದ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಲಾವಣ್ಯ ಸಿ.ಪಿ. ಕೊಟ್ಟಕೇರಿಯನ ಮಾತನಾಡಿ; ಪುಸ್ತಕಗಳನ್ನು ಬರೆಯುವವರ ನಡುವೆ ಓದುವವರ ಸಂಖ್ಯೆ ಕೂಡ ಹೆಚ್ಚಾಗಬೇಕಿದೆ. ಓದುವದರಿಂದ ಭಾಷೆ, ಅದರ ಶೈಲಿ, ಬಳಕೆ ಮಾಡುವ ಬಗ್ಗೆ ತಿಳಿಯಲಿದೆ. ಮಕ್ಕಳಿಗೆ ಮನೆಯಿಂದಲೇ ಮಾತೃಭಾಷೆ ಯನ್ನು ಕಲಿಸುವ ಕೆಲಸವಾಗಬೇಕಿದ್ದು, ಬರಹಗಾರರು ಮಕ್ಕಳಿಗೆ ಸಂಬAಧಿಸಿದ ಪುಸ್ತಕಗಳನ್ನು ಹೆಚ್ಚು ಬರೆಯುವಂತಾಗ ಬೇಕು, ಇದರಿಂದಾಗಿ ಮಕ್ಕಳಲ್ಲೂ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಯಲಿದೆ ಎಂದು ಅಭಿಪ್ರಾಯಿಸಿ ದರು. ಪ್ರಸ್ತುತ ಮೊಬೈಲ್ ಹಾವಳಿ ಯಿಂದಾಗಿ ಯುವ ಪೀಳಿಗೆಯಲ್ಲಿ ಪುಸ್ತಕ ಎಂದರೆ ಅಲರ್ಜಿ ಎಂಬ ಭಾವನೆ ಮೂಡಿದೆ. ಕಾಲ ಬದಲಾ ದಂತೆ ತಂತ್ರಜ್ಞಾನವು ಬೆಳೆಯುತ್ತಿದೆ. ಇದನ್ನು ಸದುದ್ದೇಶಕ್ಕೆ ಬಳಸಿಕೊಳ್ಳ ಬಹುದು. ಇದೀಗ ಪುಸ್ತಕಗಳು ಕೂಡ ಡಿಜಿಟಲ್ ವ್ಯವಸ್ಥೆ ಯಲ್ಲಿ ಲಭ್ಯವಿದ್ದು, ಮೊಬೈಲ್‌ನಲ್ಲಿ ಬೇರೆ ಏನನ್ನೋ ನೋಡಿ ಕಾಲಹರಣ ಮಾಡುವದಕ್ಕಿಂತ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬಹುದಾಗಿದೆ ಎಂದು ಸಲಹೆ ಮಾಡಿದರು. ಅಕಾಡೆಮಿಯ ಈ ಕಾರ್ಯಕ್ರಮ ಒಂದು ಮೈಲಿಗಲ್ಲು ಎಂದು ಬಣ್ಣಿಸಿದ ಅವರು; ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಪ್ರಯತ್ನ ಮಾಡಲಾಗಿದೆÀ ಎಂದು ಹೇಳಿದರು.

ವಿಶ್ವಕೋಶ ಗುರಿಯಾಗಿತ್ತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಮಾತನಾಡಿ, ಪದಕೋಶ, ವಸ್ತುಕೋಶ, ವಿಶ್ವಕೋಶ ತಯಾರಿ ಬಗ್ಗೆ ಯೋಜನೆಗಳನ್ನು ಆರಂಭದಿAದಲೇ ರೂಪಿಸಲಾಗಿತ್ತು. ಅನುದಾನದ ಕೊರತೆಯ ನಡುವೆ ವಿಶ್ವಕೋಶ ಹೊರತರುವದು ಗುರಿಯಾಗಿತ್ತು. ಹಾಗಾಗಿ ಕೊರತೆ ಎದುರಾಗಬ ಹುದೆಂಬ ದೃಷ್ಟಿಯಿಂದ ಬೇರೆ ಪುಸ್ತಕಗಳನ್ನು ಹೊರತಂದಿರಲಿಲ್ಲ. ಕೊನೆಯ ಕ್ಷಣದಲ್ಲಿ ಹೊಂದಾಣಿಕೆ ಆದುದರಿಂದ ಇದೀಗ ವಿಶ್ವಕೋಶ ದೊಂದಿಗೆ ೧೫ ಪುಸ್ತಕಗಳನ್ನು ಹೊರತರ ಲಾಗಿದೆ ಎಂದು ಹೇಳಿದರು. ಅಕಾಡೆಮಿ ಅವಧಿಯಲ್ಲಿ ಸಹಕರಿಸಿದ ವರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ವಿಶ್ವಕೋಶ ಹಾಗೂ ಬಿಡುಗಡೆಗೊಂಡ ಪುಸ್ತಕಗಳ ಬಗ್ಗೆ ವಿಶ್ವಕೋಶದ ಸಂಪಾದಕರೂ ಆಗಿರುವ ಅಕಾಡೆಮಿ ಸದಸ್ಯ ವಿಶ್ವನಾಥ ಬದಿಕಾನ ವಿಶ್ಲೇಷಣೆ ಮಾಡಿದರು.

ಬಿಡುಗಡೆ ಆದ ಪುಸ್ತಕಗಳು

ಪ್ರೊ. ಕೋಡಿ ಕುಶಾಲಪ್ಪ ಗೌಡರು ಬರೆದ ಗ್ರಾಂಥಿಕ ಕನ್ನಡ ಮತ್ತೆ ಅರೆಭಾಷೆ ಒಂದು ತೌಲನಿಕ ವ್ಯಾಕರಣ, ಅಕಾಡೆಮಿ ಹೊರತಂದ ಅರೆಭಾಸೆ ಕೈಪಿಡಿ, ಚೆಂಚಿಗAಟ್-ಅರೆಭಾಸೆ ಪ್ರಬಂಧ, ಕವಿತೆ ಕದ್ರ್-ಅರೆಭಾಸೆ ಪದ್ಯಗ, ಕಟ್ರತನ ಲಲಿತ ಅಯ್ಯಣ್ಣ ಅವರ ಗೂಡಿಗೆ ಮರಳಿದ ಹಕ್ಕಿ, ಲೀಲಾ ದಾಮೋದರ ಕುಂದಲ್ಪಾಡಿ ಅವರ ಗುಬ್ಬಿ ಗೂಡುನ ಚಿಲಿಪಿಲಿ, ದಶವರ್ಷ ಸ್ಮರಣ ಸಂಚಿಕೆ ಸಿರಿಮುಡಿ, ನಾಟಕಗಳ ಹೊತ್ತ್ ಕಂತ್‌ಕನ, ಐಮಂಡ ರೂಪೇಶ್ ಸಾರಥ್ಯದ ಚಿತ್ರಕಲಾ ಶಿಬಿರದ ಪ್ರÀಕೃತಿ ಸಂಸ್ಕೃತಿ ಪುಸ್ತಕಗಳು ಸೇರಿದ್ರಂತೆ ಅಮೆ ಪಾಲಾಕ್ಷ ಅವರ ಗುಡ್ಡೆಮನೆ ಅಪ್ಪಯ್ಯ ಗೌಡ, ಡಾ. ಪೂವಪ್ಪ ಕಣಿಯೂರು ಅವರ ಕೆದಂಬಾಡಿ ರಾಮಯ್ಯ ಗೌಡ, ಡಾ.ಅನುರಾಧ ಕುರುಂಜಿ ಅವರ ಕುರುಂಜಿ ವೆಂಕಟರಮಣ ಗೌಡ, ಬಾರಿಯಂಡ ಜೋಯಪ್ಪ ಅವರ ಕಾವೇರಿಮನೆ ಬೋಜಪ್ಪ, ಶೀಲಾವತಿ ಕೊಳಂಬೆ ಅವರ ಕೊಳಂಬೆ ಪುಟ್ಟಣ್ಣ ಗೌಡ, ಡಾ.ಪೂವಪ್ಪ ಕಣಿಯೂರು ಅವರ ಪುರುಷೋತ್ತಮ ಬಿಳಿಮಲೆ ಅವರುಗಳ ಕುರಿತಾದ ಅರೆಭಾಸೆ ಸಾಧಕರ ಮಾಲೆ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ಕೃಷ್ಣೇಗೌಡ, ಅಕಾಡೆಮಿ ರಿಜಿಸ್ಟಾçರ್ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರುಗಳು, ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಸದಸ್ಯರುಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಡಾ.ಕೂಡಕಂಡಿ ದಯಾನಂದ, ಕುಸುಮಾಧರ ಎ.ಟಿ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಕಿರಣ್ ಕುಂಬಳಚೇರಿ, ಭರತೇಶ್ ಅಲಸಂಡೆ ಮಜಲು ಪಾಲ್ಗೊಂಡಿದ್ದರು. ಸದಸ್ಯೆ ಸ್ಮಿತಾ ಅಮೃತರಾಜ್ ಸ್ವಾಗತಿಸಿದರೆ, ಧನಂಜಯ ಅಗೋಳಿಕಜೆ ನಿರೂಪಿಸಿದರು. ಡಾ.ಪುರುಷೋತ್ತಮ ಕರಂಗಲ್ಲು ವಂದಿಸಿದರು.