ನಾಪೋಕ್ಲು: ಸಮೀಪದ ಹಳೇ ತಾಲೂಕು ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಮೊದಲಿಗೆ ಸಾರ್ವಜನಿಕ ಮೆರವಣಿಗೆ, ನಂತರ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಹೆಚ್. ಮಹಮ್ಮದ್ ವಹಿಸಿದ್ದರು. ವೇದಿಕೆಯಲ್ಲಿ ಖತೀಬರಾದ ಶಫೀಕ್ ಇಮಾಮಿ, ಅಬ್ದುಲ್ಲಾ ಮುಸ್ಲಿಯಾರ್, ರಫೀಕ್ ಅಮಾಮಿ, ಟಿ.ಎ. ಮಹಮ್ಮದ್, ಎಂ.ಹಚ್. ಇಬ್ರಾಹಿಂ, ಎ.ಎ. ಅಬೂಬಕ್ಕರ್, ಎ.ಹೆಚ್. ಇಬ್ರಾಹಿಂ, ಟಿ.ಐ. ರಫೀಕ್ ಮತ್ತಿತರರು ಇದ್ದರು.ಹಾಕತ್ತೂರು: ಹಾಕತ್ತೂರು ಬದರ್-ಜಮಾಅತ್ ವತಿಯಿಂದ ಈದ್ ಮಿಲಾದ್ನ್ನು ಆಚರಿಸಲಾಯಿತು. ಆಚರಣೆಯ ಅಂಗವಾಗಿ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಮಸೀದಿಯ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಈದ್-ಮಿಲಾದ್ ಸಂದೇಶವನ್ನು ಸಾರಲಾಯಿತು. ಕಾರ್ಯಕ್ರಮದಲ್ಲಿ ಧರ್ಮಗುರುಗಳು ಈದ್-ಮಿಲಾದ್ ದಿನಾಚರಣೆ ಮಹತ್ವವನ್ನು ತಿಳಿಸಿದರು. ಈ ಸಂದರ್ಭ ಮಸೀದಿಯ ಆಡಳಿತ ಮಂಡಳಿತ ಪದಾಧಿಕಾರಿಗಳು ಹಾಜರಿದ್ದರು. ಹಾಕತ್ತೂರಿನ ಜಮಾಅತ್ ಅಧ್ಯಕ್ಷ ಅಬ್ದುಲ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಜುಮಾ ಮಸೀದಿ ಖತೀಬ್ ಝಕರಿಯ ಸಹದಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಸೋಮವಾರಪೇಟೆ: ಇಲ್ಲಿನ ಜಲಾಲಿಯ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಶಾದಿ ಮಹಲ್ನಲ್ಲಿ ಆಚರಣ ಸಮಿತಿ ಅಧಕ್ಷ ರಶೀದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಸೀದಿಯ ಧರ್ಮ ಗುರುಗಳಾದ ಅಬ್ದುಲ್ ಅಜೀಜ್ ಮಾತನಾಡಿ, ಎಲ್ಲರೂ ಸೌಹಾರ್ದತೆಯಿಂದ ಬದುಕುವ ಮೂಲಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಆಶಯಗಳನ್ನು ಈಡೇರಿಸಬೇಕು ಎಂದರು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ದಫ್, ಭಾಷಣ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಮದರಸದ ತರಗತಿಗಳಿಗೆ ಹೆಚ್ಚಿನ ಹಾಜರಾತಿ ಇದ್ದ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಜಲಾಲಿಯ ಮಸೀದಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ, ಉಪಾಧ್ಯಕ್ಷ ಮಜೀದ್, ಕಾರ್ಯದರ್ಶಿ ಸಮ್ಮದ್, ಆಚರಣ ಸಮಿತಿ ಕಾರ್ಯದರ್ಶಿ ಷರೀಫ್ ಸೇರಿದಂತೆ ಜಮಾಅತ್ ಸದಸ್ಯರು ಇದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸುAಟಿಕೊಪ್ಪ ಪಟ್ಟಣದ ವಿವಿಧ ಮಸೀದಿ ವತಿಯಿಂದ ಮುಸ್ಲಿಂ ಭಾಂದವರು ಮೆರವಣಿಗೆಯಲ್ಲಿ ಸಾಗಿದರು. ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್ನ ಸೈಯದ್ ಆಲವಿ ಸಖಾಫಿ, ಹನಫಿ ಜಮಾಅತ್ನ ತೌಫಿಕ್ ಅಲಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ನ ಉಸಾಮ ಸಖಾಫಿ, ಸುನ್ನಿ ಶಾಫಿ ಜಮಾಅತ್ನ ಉಸ್ಮಾನ್ ಫೈಝಿ ಹಾಗೂ ಮೌಲವಿ ಧಾರ್ಮಿಕ ಪ್ರವಚನ ನೀಡಿದರು.ಕೊಟ್ಟಮುಡಿ: ಕೊಟ್ಟಮುಡಿ ಹಳೆ ಜುಮಾ ಮಸೀದಿ ಮತ್ತು ಹೈದ್ರೋಸ್ ಜುಮಾ ಮಸೀದಿಯಿಂದ ಈದ್ ಮಿಲಾದ್ ಜಾಥಾ ನಡೆಯಿತು. ಮೆರವಣಿಗೆಯಲ್ಲಿ ಮದರಸ ವಿದ್ಯಾರ್ಥಿಗಳು ಮತ್ತು ಊರಿನ ಯುವಕರು ಸೇರಿ ದಫ್ ಪ್ರದರ್ಶನ ನಡೆಯಿತು.