ಚAದ್ರಲೋಕಕ್ಕೆ ಮೊದಲನೆಯ ಬಾರಿಗೆ ಮಾನವನು ಕಾಲಿಟ್ಟು ೫ ದಶಕಗಳೇ ಕಳೆದಿದ್ದು, ಮತ್ತೆ ಆ ಲೋಕಕ್ಕೆ ತೆರಳಲು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ಓಂSA ನಿಶ್ಚಿಯಿಸಿದೆ. ೧೯೬೯ ಜುಲೈ ೨೦ರಂದು ಅಪೋಲೋ -೧೧ ಮಿಷನ್ ಮೂಲಕ ಸಂಸ್ಥೆಯ ನೀಲ್ ಆರ್ಮ್ಸ್ಟಾçಂಗ್ ಚಂದ್ರಲೋಕಕ್ಕೆ ಕಾಲಿಟ್ಟ ಮೊದಲ ಮಾನವ ಎನಿಸಿಕೊಂಡರು. ಇವರು ಚಂದ್ರಕ್ಕಿಳಿದ ಕೆಲವೇ ನಿಮಿಷಗಳಲ್ಲಿ ಬಝ್ ಆಲ್ಡಿçನ್ ಅವರು ಕೂಡ ಚಂದ್ರನಲ್ಲಿ ಹೆಜ್ಜೆ ಹಾಕಿದ್ದರು. ಈ ಬಳಿಕ ೩ ವರ್ಷಗಳ ಅವಧಿಯಲ್ಲಿ ಒಟ್ಟು ೧೨ ಮಂದಿ ಚಂದ್ರಲೋಕವನ್ನು ಸ್ಪರ್ಶಿಸಿದ್ದಾರೆ. ಓಂSA ಅಪೋಲೋ-೧೭ ಮಿಷನ್ ಮೂಲಕ ೧೯೭೨ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಕೊನೆಯದಾಗಿ ಚಂದ್ರಲೋಕಕ್ಕೆ ಮಾನವ ಕಾಲಿಟ್ಟಿದ್ದು, ಇದೀಗ ೫೦ ವರ್ಷಗಳ ಬಳಿಕ ಮತ್ತೆ ಆ ಸಾಹಸಕ್ಕೆ ಓಂSA ದ ಆರ್ಟಿಮಿಸ್ ಮಿಷನ್ ಸಹಕಾರಿಯಾಗಲಿದೆ.

ಆರ್ಟಿಮಿಸ್

೫೦ ವರ್ಷಗಳ ಸುದೀರ್ಘ ಅವಧಿಯ ಬಳಿಕ ಮತ್ತೆ ಮಾನವನು ಚಂದ್ರನಲ್ಲಿಗೆ ಹೋಗುತ್ತಿರುವ ಕಾರಣ ೨ ರಿಂದ ೩ ‘ಟ್ರಯಲ್ ರನ್’ಗಳ ಅವಶ್ಯಕತೆ ಇದೆ. ಓಂSA ಆರ್ಟಿಮಿಸ್ ೧,೨,೩....೮ ಮೂಲಕ ಈ ಕಾರ್ಯವನ್ನು ಸಾಧಿಸಲು ಮುಂದಾಗಿದೆ. ಆದರೆ ತಾಂತ್ರಿಕ ದೋಷಗಳಿಂದಾಗಿ ಆರ್ಟಿಮಿಸ್-೧ ಮಿಷನ್ ಇನ್ನೂ ಯಶಸ್ಸು ಕಾಣದೆ ಇರುವುದು ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ನವೆಂಬರ್ ತಿಂಗಳಿನಲ್ಲಿ ಈ ಮಿಷನ್ ಸಫಲವಾಗುವ ನಿರೀಕ್ಷೆಯಿದೆ.

ಆರ್ಟಿಮಿಸ್-೧ ಮೂಲಕ ಒರಯನ್ ಎಂಬ ಬಾಹ್ಯಾಕಾಶ ನೌಕೆಯು ಚಂದ್ರನೆಡೆಗೆ ಮಾನವ ರಹಿತವಾಗಿ ಚಲಿಸಿ ೨೦ ರಿಂದ ೩೦ ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತಿ ಮತ್ತೆ ಭೂಮಿಗೆ ಹಿಂತಿರುಗಬೇಕು. ಈ ತನ್ನ ಮಿಷನ್‌ನಲ್ಲಿ ಸದರಿ ಬಾಹ್ಯಾಕಾಶ ವಿಮಾನ ಒರಯನ್, ಮಾನವ ಸಹಿತವಾಗಿ ಚಂದ್ರಕ್ಕೆ ತೆರಳಲು ಸಮರ್ಥವಿದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲಾಗುವುದು.

೨೦೨೪ರಲ್ಲಿ ಆರ್ಟಿಮಿಸ್-೨ ಮೂಲಕ ಓಂSA ಸಂಸ್ಥೆಯ ೪ ಗಗನಯಾತ್ರಿಯರು ಒರಯನ್ ನೌಕೆಯಲ್ಲಿ ಭೂಮಿಯ ಸುತ್ತ ಪ್ರದಕ್ಷಿಸಿ ಚಂದ್ರನ ಸುತ್ತ ಒಮ್ಮೆ ತಿರುಗಿ ಭೂಮಿಗೆ ಹಿಂತಿರುಗಲಿದ್ದಾರೆ.

ಆರ್ಟಿಮಿಸ್-೩ ಮಿಷನ್ ೨೦೨೫ ರಂದು ಕೈಗೊಳ್ಳಲಾಗುವುದು. ಆರ್ಟಿಮಿಸ್-೪ ೨೦೨೭ ರಂದು ನಡೆಯಲಿದೆ. ಇವುಗಳೆರಡು ಮಿಷನ್‌ಗಳು ಚಂದ್ರಕ್ಕೆ ಪಯಣಿಸುವ ಮಿಷನ್‌ಗಳೇ ಆಗಿದ್ದು, ಗಗನಯಾತ್ರಿಯರು ಚಂದ್ರನ ಪದರದಲ್ಲಿ ಕಾಲಿಡಲಿದ್ದಾರೆ.

ಆರ್ಟಿಮಿಸ್-೫ ಹಾಗೂ ಆರ್ಟಿಮಿಸ್-೬,೭,೮ ಮಿಷನ್‌ಗಳು ಮುಂಬರುವ ವರ್ಷಗಳಲ್ಲಿ ಚಂದ್ರಲೋಕದಲ್ಲೇ ಮಾನವ ಆವಾಸಸ್ಥಾನ, ಮೂಲಸೌಕರ್ಯಗಳನ್ನು ಕಲ್ಪಿಸಬಲ್ಲ ಮಹಾತ್ವಾಕಾಂಕ್ಷೆಯ ಯೋಜನೆಗಳಾಗಿವೆ.

ಆದರೆ, ಇವುಗಳೆಲ್ಲದರ ಯಶಸ್ಸಿಗೆ ಆರ್ಟಿಮಿಸ್-೧ ಮಿಷನ್ ಸಫಲವಾಗಬೇಕಿದ್ದು, ತಾಂತ್ರಿಕ ದೋಷದಿಂದಾಗಿ ಮೊದಲನೇ ಬಾರಿ ಉಡಾವಣೆ ಸ್ಥಗಿತಗೊಂಡಿತ್ತು. ಎರಡು ಹಾಗೂ ೩ನೇ ಪ್ರಯತ್ನದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಸ್ಥಗಿತಗೊಂಡ ಬಾಹ್ಯಾಕಾಶ ನೌಕೆ ಒರಯನ್‌ನ ಉಡಾವಣೆ ಇದೀಗ ನವೆಂಬರ್ ತಿಂಗಳಿಗೆ ಮುಂದೂಡಲ್ಪಟ್ಟಿದೆ. - ಪ್ರಜ್ವಲ್