ಹೊದ್ದೂರು, ಅ. ೧೦: ಪ್ರಕೃತಿಯನ್ನು ಉಳಿಸಿದರೆ ಮಾತ್ರ ಜನಾಂಗದ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಹೇಳಿದರು.

ಮೂರ್ನಾಡು ಕೊಡವ ಸಮಾಜಕ್ಕೆ ನೂತನವಾಗಿ ನಿರ್ಮಿಸಲಾದ ತಡೆಗೋಡೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಪ್ರಕೃತಿ ಮಾತೆಗೆ ಗೌರವ ನೀಡಿ, ಪ್ರಕೃತಿಯ ಮೂಲಕ ಸಂಸ್ಕೃತಿ-ಸAಪ್ರದಾಯ, ಪದ್ಧತಿ-ಪರಂಪರೆಗಳು ಬೆಳೆಯಲು, ಬೆಸೆಯಲು ಸಾಧ್ಯ. ಯಾವುದೇ ಕಾರಣಕ್ಕೂ ಸ್ನೇಹಜೀವಿಯಾದ ಮನುಷ್ಯರು ಪ್ರಕೃತಿಯೊಂದಿಗೆ ಬೆರೆತು ಬದುಕನ್ನು ಸಾಗಿಸುವಂತಾಗಬೇಕು. ಇದರೊಂದಿಗೆ ಪೀಳಿಗೆಯ ಮಕ್ಕಳಿಗೆ ಪ್ರಕೃತಿಯಲ್ಲಿ ಅಡಕವಾಗಿರುವ ಸಂಸ್ಕೃತಿಯನ್ನು ಹಿರಿಯರು ಪರಿಚಯಿಸುವಂತಾಗಲಿ ಎಂದು ಅಪ್ಪಚ್ಚು ರಂಜನ್ ಸಲಹೆ ನೀಡಿದರಲ್ಲದೆ, ಸ್ವರ್ಗಲೋಕದಂತಿರುವ ಕೊಡಗನ್ನು ಪರಿಸರ ನಾಶದ ಮೂಲಕ ನರಕಲೋಕ ಮಾಡದೇ ರಕ್ಷಿಸಿ ಪೋಷಿಸುವಂತಾಗಬೇಕು ಎಂದು ಹೇಳಿದರು. ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ, ಉಪಾಧ್ಯಕ್ಷ ಚೇನಂಡ ಅಯ್ಯಣ್ಣ, ಕಾರ್ಯದರ್ಶಿ ಕಂಬೀರAಡ ಗೌತಂ, ಖಜಾಂಚಿ ಮಡೆಯಂಡ ಪ್ರೀಣಾ, ನಿರ್ದೇಶಕರುಗಳು ಹಾಗೂ ವ್ಯವಸ್ಥಾಪಕ ಮೂಡೆರ ಮನು ಮಾದಪ್ಪ ಉಪಸ್ಥಿತರಿದ್ದರು.