ಪೆರಾಜೆ, ಅ. ೧೦: ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಆಯುಧಪೂಜೆ ಹಾಗೂ ವಾಹನ ಪೂಜಾ ಕಾರ್ಯಕ್ರಮವು ನಡೆಯಿತು.

ದೇವಸ್ಥಾನದ ಅರ್ಚಕರಾದ ವೆಂಕಟ್ರಮಣ ಕೆ. ಪಾಂಙಣಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ ಅಮೆಚೂರ್, ಸೇರಿದಂತೆ ತಕ್ಕಮುಖ್ಯಸ್ಥರು, ಮಸಜಿ ಮೊಕ್ತೇಸರರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.