ಗೋಣಿಕೊಪ್ಪ ವರದಿ, ಅ. ೧೦: ಕಲ್ಲಹಳ್ಳ ವನ್ಯಜೀವಿ ವಲಯ ವತಿಯಿಂದ ವನ್ಯಜೀವಿ ಸಪ್ತಾಹ ಅಂಗವಾಗಿ ಕಾರ್ಮಾಡು ಗ್ರಾಮದ ಮುಖ್ಯ ರಸ್ತೆ ಮತ್ತು ಲಕ್ಷö್ಮಣತೀರ್ಥ ನದಿಯ ದಡದಲ್ಲಿ ಶ್ರಮದಾನ ನಡೆಸಲಾಯಿತು. ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಸುಮಾರು ೧೬ ಚೀಲ ತ್ಯಾಜ್ಯ ಸಂಗ್ರಹಿಸಲಾಯಿತು.

ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ಗಳಲ್ಲಿ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಶುಚಿತ್ವಕ್ಕೆ ವಿಶೇಷ ಕಾಳಜಿ ವಹಿಸುತ್ತಿದೆ.

ಅರಣ್ಯ ಇಲಾಖೆ ಕೂಡ ಕೈಜೋಡಿಸಿರುವುದ ರಿಂದ ಗ್ರಾಮವನ್ನು ಮತ್ತಷ್ಟು ಸ್ವಚ್ಛತೆಯಲ್ಲಿಡಲು ಸಹಕಾರಿ ಯಾಗುತ್ತಿದೆ. ನಾಗರಿಕರು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಗ್ರಾ.ಪA. ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ಸದಸ್ಯ ಚಕ್ಕೇರ ಸೂರ್ಯ ಅಯ್ಯಪ್ಪ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಕುಮಾರಸ್ವಾಮಿ, ಮುಜಾಬುದ್ದೀನ್ ಫಕಾಲಿ ಇದ್ದರು.