ಕೂಡಿಗೆ, ಅ. ೧೦: ಇಲ್ಲಿಗೆ ಸಮೀಪದ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಜೆಸಿ ಸಂಸ್ಥೆ ಸೋಮವಾರಪೇಟೆ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮನೋಬಲ ತರಬೇತಿ ಕಾರ್ಯಕ್ರಮದ ಅಂಗವಾಗಿ ಹೆಬ್ಬಾಲೆ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿಯಾದ ಎ.ಆರ್. ಮಮತಾ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘ ಹೆಬ್ಬಾಲೆಯ ಅಧ್ಯಕ್ಷ ಹೆಚ್.ಎಲ್. ರಮೇಶ್ ಅವರು ವಹಿಸಿಕೊಂಡಿದ್ದರು.

ಸAಪನ್ಮೂಲ ವ್ಯಕ್ತಿಯಾಗಿ ಮಮತಾ ಅವರು ವಿದ್ಯಾರ್ಥಿಗಳಿಗೆ ಮನೋಬಲ ತರಬೇತಿಯಲ್ಲಿ ಆಧುನಿಕ ತಂತ್ರಜ್ಞಾನದ ನೂತನ ಶಿಕ್ಷಣ ವ್ಯವಸ್ಥೆಗೆ ಪೂರಕವಾದ ಸ್ಪರ್ಧಾತ್ಮಕ ವಿಷಯಗಳ ಆಧಾರಿತವಾದ ಅನೇಕ ಮಹತ್ವದ ವಿಷಯಗಳನ್ನು ನೀಡಿದರು. ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಬೇಕು.

ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಶಾಲೆಯ ಬಗ್ಗೆ ಅಭಿಮಾನ ಇರಬೇಕು ಎಂದು ಸಲಹೆಯಿತ್ತರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎನ್. ಧರ್ಮಪ್ಪ ಸ್ವಾಗತಿಸಿದರು. ಡಿ. ಕವಿತ ನಿರೂಪಿಸಿದರು. ಉಪನ್ಯಾಸಕ ವಿಜಯ್ ಕುಮಾರ್ ವಂದಿಸಿದರು.