ಪೆರಾಜೆ, ಅ. ೧೦: ಇಲ್ಲಿಯ ಕುಂಬಳಚೇರಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ಸಪ್ತಾಹ ಕಾರ್ಯಕ್ರಮ ಇತ್ತೀಚೆಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಮತ್ತು ಅದರ ಮಾಹಿತಿ ನೀಡಲಾಯಿತು. ಮಾತೃವಂದನ ಮತ್ತು ಮಾತೃಪೂರ್ಣ ಯೋಜನೆಯ ಬಗ್ಗೆ ತಿಳಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಉದಯಚಂದ್ರ ಕುಂಬಳಚೇರಿ, ಸಿ.ಹೆಚ್.ಓ ಸುನಿಲ್, ಶಾಲಾ ಶಿಕ್ಷಕಿ ಶಾಂತಲಾ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಕನಕಾಂಬಿಕೆ, ಎನ್.ಸಿ.ಆರ್.ಪಿ. ಶೀಲಾ ಚಿದಾನಂದ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ವನಿತಾ ನಿಡ್ಯಮಲೆ ಸೇರಿದಂತೆ ಗರ್ಭಿಣಿಯರು, ತಾಯಂದಿರು, ಪೋಷಕರು ಇದ್ದರೂ. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಯುವಕಲಾ ಪಿ.ಕೆ. ಸ್ವಾಗತಿಸಿ, ವಂದಿಸಿದರು.