ಚೆಯ್ಯಂಡಾಣೆ, ಅ. ೧೦: ಚೆಯ್ಯಂಡಾಣೆಯ ನರಿಯಂದಡದ ಅಯ್ಯಪ್ಪ ಯುವಕ ಸಂಘದಲ್ಲಿ ವಾಹನಗಳಿಗೆ ಸಾಮೂಹಿಕ ಪೂಜೆ ನಡೆಯಿತು.
೪೦ ಕ್ಕೂ ಹೆಚ್ಚು ವಾಹಗಳಿದ್ದವು. ಅಲಂಕೃತ ವಾಹನಗಳ ಸಾಲು ಗಮನ ಸೆಳೆಯಿತು. ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ಶಿವಶರ್ಮ ವಹಿಸಿದರು.
ಈ ಸಂದರ್ಭ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಬೆಳಿಯಂಡ್ರ ಹರಿಪ್ರಸಾದ್, ಉಪಾಧ್ಯಕ್ಷ ಮಞಪುರ ಛಾಯಾ ಪ್ರಕಾಶ್, ಕೋಶಾಧಿಕಾರಿ ಪೊಕ್ಕುಳಂಡ್ರ ಮನೋಹರ್ ಸದಸ್ಯರಾದ ತೋಟಂಬೈಲು ಅನಂತ್ ಕುಮಾರ್, ಹಿರಿಯರಾದ ಪೊಕ್ಕುಳಂಡ್ರ ಪಳಂಗಪ್ಪ, ನಾಣಯ್ಯ, ಬೆಳಿಯಂಡ್ರ ಲಕ್ಷö್ಮಣ ಮತ್ತಿತರರು ಇದ್ದರು.