ಗೋಣಿಕೊಪ್ಪ ವರದಿ, ಅ. ೧೦ : ಗುಜರಾತ್ ರಾಜಕೋಟ್ನಲ್ಲಿ ನಡೆಯುತ್ತಿರುವ ೩೬ ನೇ ರಾಷ್ಟಿçÃಯ ಹಾಕಿ ಕ್ರೀಡಾಕೂಟದಲ್ಲಿ ಕೊಡಗಿನ ಆಟಗಾರರನ್ನು ಹೊಂದಿರುವ ಕರ್ನಾಟಕ ರಾಜ್ಯ ತಂಡ ಫೈನಲ್ ಪ್ರವೇಶ ಪಡೆದಿದ್ದು, ತಾ. ೧೧ ರಂದು (ಇಂದು) ಉತ್ತರಪ್ರದೇಶ ತಂಡವನ್ನುಎದುರಿಸಲಿದೆ.
ಹರಿಯಾಣ ವಿರುದ್ಧ ನಡೆದ ಸೆಮಿಫೈನಲ್ನಲ್ಲಿ ಕೊಡಗಿನ ಎಸ್.ವಿ. ಸುನಿಲ್ ನಾಯಕತ್ವದ ಕರ್ನಾಟಕ ತಂಡ ೩-೧ ಗೋಲುಗಳಿಂದ ಗೆದ್ದು ಬೀಗಿತು. ಕೊಡಗಿನ ಆಟಗಾರರಾದ ಆಭರಣ್ ಸುದೇವ್, ನಿಕಿನ್ ತಿಮ್ಮಯ್ಯ ಗೋಲು ಹೊಡೆದು ಗಮನ ಸೆಳೆದರು. ಕೊಡಗಿನ ಆಟಗಾರರಾದ ಕುಪ್ಪಂಡ ಸೋಮಯ್ಯ, ಎನ್. ಎಂ. ಸೂರ್ಯ, ಕೆ. ಪಿ. ಶರತ್, ಪ್ರಥ್ವಿರಾಜ್, ಐನಂಡ ನಾಚಪ್ಪ ತಂಡದಲ್ಲಿದ್ದಾರೆ. ಫೈನಲ್ ಪಂದ್ಯಾಟ ೩.೩೦ಕ್ಕೆ ಡಿ.ಡಿ. ವಾಹಿನಿಯಲ್ಲಿ ಪ್ರಸಾರವಾಗಲಿದೆ.