ಮಡಿಕೇರಿ, ಅ.೧೦: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ತಾ. ೧೧ ರಂದು ಬೆಳಗ್ಗೆ ೧೦.೩೦ ಗಂಟೆಗೆ “ಕೊಡಗ್‌ರ ದೇವಕಾಡ್-ಕಾಡ್‌ಪಣ್ಣ್ ಪಿಂಞ ಕಾಡ್‌ಜಾತಿಯಡ ವಿಶೇಷತೆ-ಅರಿವು” ಕಾರ್ಯಕ್ರಮವು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷÀ ನಾಪಂಡ ಎಂ.ರವಿ ಕಾಳಪ್ಪ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಡೀನ್ ಡಾ.ಚೆಪ್ಪುಡಿರ ಜಿ.ಕುಶಾಲಪ್ಪ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕರಾದ ಡಾ.ಸತೀಶ್ ಬಿ.ಎನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷÀ ಕಾಡ್ಯಮಾಡ ಮನು ಸೋಮಯ್ಯ ಅವರುಗಳು ಭಾಗವಹಿಸಲಿದ್ದಾರೆ ಹಾಗೂ ಡಾ.ಚೆಪ್ಪುಡಿರ ಜಿ.ಕುಶಾಲಪ್ಪ ರವರು ‘ದೇವರಕಾಡ್‌ರ ವಿಶಿಷ್ಠತೆ ಮತ್ತು ಉಪಯೋಗ’, ಡಾ.ಸತೀಶ್ ಬಿ.ಎನ್ ‘ಕೊಡಗ್‌ರ ಕಾಡ್‌ಪಣ್ಣ್’, ಮತ್ತು ಕಾಡ್ಯಮಾಡ ಮನು ಸೋಮಯ್ಯ ಇವರು ‘ಮಾನವ ಮತ್ತು ಕಾಡ್ ಜಾತಿ’ ಎಂಬ ವಿಷಯಗಳ ಬಗ್ಗೆ ವಿಚಾರಮಂಡನೆಯನ್ನು ಮಾಡಲಿದ್ದಾರೆ.

ಪುತ್ತಾಮನೆ ವಿದ್ಯಾ ಜಗದೀಶ್ ರವರು ಬರೆದಿರುವ ‘ಕೊಡಗಿನ ದೇವರಕಾಡಿನ ವಿಶ್ಲೇಷಣೆ’ (ಸಂಶೋಧನಾ ಪ್ರಬಂಧ), ಅಪ್ಪಚಟ್ಟೋಳಂಡ ಎಂ.ಅಪ್ಪಯ್ಯ ‘ಇಣhಟಿo-ಃoಣಚಿಟಿiಛಿಚಿಟ Wiಟಜ ಈಡಿuiಣs oಜಿ ಏoಜಚಿgu’ (ದಾಖಲೀಕರಣ ಪ್ರಬಂಧ), ಮತ್ತು ಡಾ.ಡಿ.ಸಿ.ನಂಜುAಡ ಇವರು ಬರೆದಿರುವ ‘ಮಾನವ ಮತ್ತು ವನ್ಯಜೀವಿ ಸಂಘರ್ಷ’(ಸAಶೋಧನಾ ಪ್ರಬಂಧ) ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕರ್ನಾಟಕ ಕೊಡವ ಅಕಾಡೆಮಿಯ ಅಧ್ಯಕ್ಷೆÀ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.