ಮಡಿಕೇರಿ, ಅ. ೯: ಮಡಿಕೇರಿಯ ವಿನಾಯಕ ಕೊಡವ ಕೇರಿಯ ವತಿಯಿಂದ ಕೊಡವ ಸಮಾಜ ಸಭಾಂಗಣದಲ್ಲಿAದು ಕೈಲ್ ಪೊಳ್ದ್ ಸಂತೋಷ ಕೂಟ ಕಾರ್ಯಕ್ರಮ ನಡೆಯಿತು. ಕೇರಿಯ ಅಧ್ಯಕ್ಷ ಕುಡುವಂಡ ಬಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಉತ್ತಪ್ಪ ಅವರು ಹಬ್ಬದ ಹಿಂದಿನ ಆಚರಣೆ ಹಾಗೂ ಸಂಸ್ಕೃತಿಯ ಮಹತ್ವದ ಬಗ್ಗೆ ತಿಳಿಸಿದರು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯೊಂದಿಗೆ ಕೊಡವ ಸಮಾಜದ ಆಡಳಿತ ಮಂಡಳಿ ಚುನಾಯಿತರಾದ ಕಾಂಡೆರ ಲಲ್ಲು ಕುಟ್ಟಪ್ಪ ಹಾಗೂ ಚೊಟ್ಟೆರ ಸಂಜು ಅವರುಗಳನ್ನು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಉತ್ತಪ್ಪ ಅವರು ಹಬ್ಬದ ಹಿಂದಿನ ಆಚರಣೆ ಹಾಗೂ ಸಂಸ್ಕೃತಿಯ ಮಹತ್ವದ ಬಗ್ಗೆ ತಿಳಿಸಿದರು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯೊಂದಿಗೆ ಕೊಡವ ಸಮಾಜದ ಆಡಳಿತ ಮಂಡಳಿ ಚುನಾಯಿತರಾದ ಕಾಂಡೆರ ಲಲ್ಲು ಕುಟ್ಟಪ್ಪ ಹಾಗೂ ಚೊಟ್ಟೆರ ಸಂಜು ಅವರುಗಳನ್ನು ಸನ್ಮಾನಿಸಲಾಯಿತು.

ಉತ್ತಪ್ಪ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಮಂಡೇಟಿರ ಡೈಸಿ ಮಂದಪ್ಪ, ಕಾರ್ಯದರ್ಶಿ ಪೆಮ್ಮುಡಿಯಂಡ ಎಂ. ಉತ್ತಪ್ಪ (ಸದಾ) ಖಜಾಂಚಿ, ಕನ್ನಿಕಂಡ ಮೋನಿಕಾ ಚಂಗಪ್ಪ ಹಾಗೂ ನಿರ್ದೇಶಕರುಗಳು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚೊಟ್ಟೆಯಂಡ ಕೆ. ಅಪ್ಪಾಜಿ ವೇದಿಕೆಯಲ್ಲಿದ್ದರು.